ಅಮೆರಿಕಾದ ಹಿಂದೂ ಸ್ವಯಂಸೇವಕ ಸಂಘದ ನಾರಾಯಣ್‌ ಚಾಂದಕ್‌ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ

0

ಕಲ್ಲಡ್ಕ : ಅಮೆರಿಕಾದ ಹಿಂದೂ ಸ್ವಯಂಸೇವಕ ಸಂಘದ ಒಂದು ವಿಭಾಗದ ಸಂಘಚಾಲಕರಾದ ನಾರಾಯಣ್‌ ಚಾಂದಕ್ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು.

ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ವಿದ್ಯಾರ್ಥಿಗಳಿಂದ ನಡೆದ ಮಲ್ಲಕಂಬ, ಕೂಪಿಕಾ, ಸ್ಕೇಟಿಂಗ್, ಬೆಂಕಿ ಸಾಹಸ ಹಾಗೂ ಜಡೆ ಕೋಲಾಟ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು “ವಿದ್ಯಾರ್ಥಿಗಳಾದ ನೀವು ಮಧುರವಾದ, ಸುಂದರವಾದ, ಭಾವನಾತ್ಮಕವಾದ,ಮಾತೃಭಾಷೆ ಕನ್ನಡವನ್ನು ಕರ್ನಾಟಕದಂತಹ ಮಹಾಕ್ಷೇತ್ರದಲ್ಲಿ ಕಲಿಯುವ ವರದಾನವನ್ನು ಮಾತೆ ಸರಸ್ವತಿಯು ನಿಮಗೆ ನೀಡಿದ್ದಾಳೆ. ಹಾಗೂ ನಾವು ಪ್ರತಿ ಭಾಷೆ ಕಲಿಯುವುದರಿಂದ ಆ ಭಾಷೆ ಬಲ್ಲವರ ಅಂತಃಕರಣದೊಂದಿಗೆ ಸಂಬಂಧವನ್ನು ಬೆಸೆದುಕೊಳ್ಳುತ್ತೇವೆ. ಎಲ್ಲಿ ಸಂಸ್ಕಾರ ಶಕ್ತಿ, ಸಂಘಟನಾ ಶಕ್ತಿ,ಧ್ಯಾನ ಶಕ್ತಿ, ಮಂತ್ರ ಶಕ್ತಿ, ಒಳ್ಳೆಯ ಕಾರ್ಯಇರುತ್ತದೆಯೋ ಅಲ್ಲಿ ಸುರಕ್ಷತೆ ಸದಾ ಇದ್ದೇ ಇರುತ್ತದೆ.ಅಂತಹ ಪುಣ್ಯ ಸ್ಥಳದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ನೀವೇ ಪುಣ್ಯವಂತರು” ಎಂದು ಶ್ಲಾಘಿಸಿದರು.


ಮುಂಬೈನ ಉದ್ಯಮಿ ನಾರಾಯಣ್ ಬಿ. ಶೆಟ್ಟಿ ಮಾತನಾಡಿ “ಸಂಸ್ಥೆಯಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಜೀವನದಲ್ಲಿ ಉತ್ತಮವಾದ ಶ್ರೇಯಸ್ಸನ್ನು ಗಳಿಸಿ” ಎಂದು ಶುಭ ಹಾರೈಸಿದರು.


ಅಮೇರಿಕಾದಲ್ಲಿ ಉದ್ಯಮಿಯಾಗಿರುವ ಸಂದೇಶ ಹೆಗಡೆ ಮಾತನಾಡಿ “ಈ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ನೀವೇ ಅದೃಷ್ಟವಂತರು” ಎನ್ನುತ್ತಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕದಕ್ಷಿಣ ಪ್ರಾಂತ ಪಚಾರ ಪ್ರಮುಖರು ಸುನಿಲ್ ಕುಲಕರ್ಣಿ, ಮಾತನಾಡಿ “ಶಿಕ್ಷಕರು ನಿಮಗೋಸ್ಕರ ಪಡುತ್ತಿರುವ ಶ್ರಮವನ್ನುಅರಿತು ನೀವು ಶ್ರಮಪಟ್ಟು ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮವಾಗಿ ಸಾಧನೆಯನ್ನು ಮಾಡಿ ಹಾಗೂ ಇಲ್ಲಿ ಸಿಗುತ್ತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೀವು ಕಲಿತಿರುವ ಶಾಲೆಗೆ ಕೀರ್ತಿತನ್ನಿ” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು ಡಾ | ಪ್ರಭಾಕರ್ ಭಟ್‌ ಕಲ್ಲಡ್ಕ, ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರು ರಮೇಶ್‌ ಎನ್ ಹಾಗೂ ಶ್ರೀರಾಮ ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here