ಬಿ.ಎ ಐಟಿಐ ತುಂಬೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸೇರ್ಪಡೆಯ ಸಮಾಲೋಚನಾ ಸಭೆ

0

ಬಂಟ್ವಾಳ: ಜು.10ರಂದು ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆಯಲ್ಲಿ 2023-24ನೇ ಸಾಲಿನ ವಿವಿಧ ತಾಂತ್ರಿಕ ತರಬೇತಿ ಕೋರ್ಸುಗಳಿಗೆ ಸೇರ್ಪಡೆಗೊಳ್ಳಲು ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಐಟಿಐಗಳ ಮಹತ್ವ, ತರಬೇತಿಯ ನಂತರದ ಉನ್ನತ ವಿದ್ಯಾಭ್ಯಾಸ, ಸ್ವಉದ್ಯೋಗ, ಖಾಸಗಿ ಹಾಗೂ ಸರಕಾರಿ ವಲಯಗಳಲ್ಲಿ ಉದ್ಯೋಗದ ಬಗ್ಗೆ ವಿವಿಧ ಉದಾಹರಣೆಗಳೊಂದಿಗೆ Eminent Educational Institute ಮೆಲ್ಕಾರ ಇದರ ಪ್ರಾಚಾರ್ಯರಾದ ಇರ್ಷಾದರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು. ಪರಿಸರ ಸ್ನೇಹಿ ಶ್ರೀ ನಾಗರಾಜ್ ಆಗಮಿಸಿ ಪ್ರಸ್ತುತ ಕಾಲಘಟ್ಟದಲ್ಲಿ ಐಟಿಐ ಶಿಕ್ಷಣದಿಂದ ಬಡತನದ ನಿವಾರಣೆ ಸಾಧ್ಯವೆಂದರು. ಇತ್ತೀಚೆಗೆ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಿಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಶಾ ಪತ್ರ ವಿತರಿಸಿದರು. ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದ ಪ್ರಾಂಶುಪಾಲರು ಸರಕಾದದಿಂದ ಸಿಗುವ ಸೌಲಭ್ಯಗಳಲ್ಲಿ ಮುಖ್ಯವಾಗಿ Post Metric, ಕಟ್ಟಡ ಕಾರ್ಮಿಕ, ಬೀಡಿ ಕಾರ್ಮಿಕ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಿದ್ಯಾರ್ಥಿ ವೇತನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮೊದಲ ಹಂತದ ಸಮಾಲೋಚನಾ ಸಭೆ ಇದಾಗಿದ್ದು ಉಳಿದ ಸೀಟುಗಳಿಗೆ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ ಎಂಬುದಾಗಿ ತಿಳಿಸಿದರು. ಕಿರಿಯ ತರಬೇತಿ ಅಧಿಕಾರಿ ರಾಜೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಸಾಬಿತ್, ಅಜ್‌ಮಾನ್ ಹಾಗೂ ಯಾಸೀರ್ ಪ್ರಾರ್ಥನೆಗೈದರು.‌

LEAVE A REPLY

Please enter your comment!
Please enter your name here