ಬಂಟ್ಟಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 12ನೇ ಕಂಬಳಬೆಟ್ಟು ಶಾಖೆಯನ್ನು ಇಲ್ಲಿನ ದರ್ಬಾರ್ ಕಾಂಪ್ಲೆಕ್ಸ್ ನಲ್ಲಿ ಸೆ.3ರಂದು ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ನೂತನ ಶಾಖೆ ಎಲ್ಲಾ ಕ್ಷೇತ್ರದಲ್ಲಿ ಯಶಶ್ವಿಯಾಗಲಿ. ಇನ್ನಷ್ಟು ಶಾಖೆಗಳನ್ನು ತೆರೆಯುವಂತೆ ಆಗಲಿ ಎಂದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸ ಶಾಖೆಯ ಆರಂಭದಲ್ಲಿ 1.07 ಕೋಟಿ ಹೊಸ ಠೇವಣಿ ಬಂದಿದೆ. ನಮ್ಮಲ್ಲಿ 30 ಕೋಟಿ ರೂ. ಠೇವಣಿ ಇದೆ. ಸಂಘದಲ್ಲಿ 175 ಮಹಿಳಾ ಸ್ವ ಸಹಾಯ ಗುಂಪು ಇದೆ ಎಂದರು.
ಅರ್ಹ ಎಲ್ಲರಿಗೂ ಸಾಲ ನೀಡಿದ್ದೇವೆ. ನಮ್ಮಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಗಳು ಇದ್ದಾರೆ. ಕಳೆದ ಅವಧಿಯಲ್ಲಿ ಶೇ. 97.2 ಸಾಲ ವಸೂಲಾತಿ ಸಾಧನೆ ಈ ಮಹಿಳಾ ಸಿಬಂದಿಗಳಿಂದ ಆಗಿದೆ ಎಂದರು. ನಮ್ಮ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಬ್ರಹ್ಮ ನಾರಾಯಣ ಗುರುಗಳ ತತ್ವ ಆದರ್ಶದಂತೆ ನಡೆದಿದೆ. ಎಂದರು.
ಜಿ. ಪ. ಸದಸ್ಯ ಎಂ.ಎಸ್. ಮಹಮ್ಮದ್ ನಿರಖು ಠೇವಣಿ ಪತ್ರ ವಿತರಿಸಿ ಶುಭ ಹಾರೈಸಿದರು. ಕುಂಡಡ್ಕ ಬಿಲ್ಲವ ಸಂಘದ ಗೌರವ ಅಧ್ಯಕ್ಷ ನಾರಾಯಣ ಪೂಜಾರಿ ಎಸ್ . ಕೆ., ವಿಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷ ಪುನೀತ್ ಮಾಡತ್ತಾರು, ವಿಟ್ಲಮುಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್. , ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್., ವಿಟ್ಲ ಮೂರ್ತೆದಾರರ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ ಕೆ.ಕೆ., ಹರೀಶ್ ಪೂಜಾರಿ ಮರುವಾಳ ಸಭೆಯಲ್ಲಿ ಶುಭ ಹಾರೈಸಿದರು.
ಕಾಂಪ್ಲೆಕ್ಸ್ ಮಾಲಕ ಮೊಯ್ದಿನ್ ಹಾಜಿ, ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ, ಅಶೋಕ ಪೂಜಾರಿ ಕೋಮಾಲಿ, ಜಯ ಶಂಕರ್ ಕಾನ್ಸಾಲೆ, ಕೆ. ಸುಜಾತ ಎಮ್., ವಾಣಿ ವಸಂತ, ಅರುಣ್ ಕುಮಾರ್ ಎಮ್. ಆಶಿಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಶಾಖಾ ವ್ಯವಸ್ಥಾಪಕಿ ಪಲ್ಲವಿ ಲೊಕೇಶ್ ಉಪಸ್ಥಿತರಿದ್ದರು. ನಿರ್ದೇಶಕರಾದ ರಮೇಶ ಅನ್ನಪ್ಪಾಡಿ ಸ್ವಾಗತಿಸಿದರು. ಜಯಶಂಕರ ಕಾನ್ಸಾಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.