ಕಡೇಶಿವಾಲಯ: ರೋಟರಿ ಸಮುದಾಯ ದಳ ಕಡೇಶಿವಾಲಯ ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ(ರಿ.) ಮಂಗಳೂರು ಇವುಗಳ ಆಶ್ರಯದಲ್ಲಿ ಸೆ.1ರಂದು ಸಂಸ್ಥೆಯಲ್ಲಿ ಮಂಗಳೂರು ವಿಜಯ ಗ್ರಾಮೀಣ ಪ್ರತಿಷ್ಠಾನ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಹೆಗ್ಡೆ ಇವರ ಅಮೃತ ಹಸ್ತದಲ್ಲಿ ಉಚಿತ ಮಹಿಳಾ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ದೀಪ ಬೆಳಗಿಸುವುದರ ಮೂಲಕ ಗ್ರಾಮೀಣ ರೋಟರಿ ಭವನ ಇಲ್ಲಿ ನಡೆಯಿತು .
ಸಭಾಕಾರ್ಯಕ್ರಮದ ಸಭಾಧ್ಯಕ್ಷರಾಗಿ ರೋ|PHF ಪ್ರಕಾಶ್ ಬಾಳಿಗ ಭಾಗವಹಿಸಿ, ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡ ಕಡೇಶಿವಾಲಯ ಶಾಖೆಯ ಮ್ಯಾನೇಜರ್ ಧನಂಜಯ್ ಏಚ್, ದೀಕ್ಷಾ ಕಿರಣ್ ಶೆಟ್ಟಿ ನಡೈಲು ಮತ್ತು ರೋಟರಿ ಸಮುದಾಯ ದಳದ ಅಧ್ಯಕ್ಷ ಕಿಶೋರ್ ಕುಮಾರ್ ಬಿ, ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳ ಕಡೇಶಿವಾಲಯದ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ದಳದ ಕಾರ್ಯದರ್ಶಿಯವರಾದ ಝಹೀರ್ ಪ್ರತಾಪನಗರ ವಂದಿಸಿ, ಯೋಗೀಶ್ ನಾಯ್ಕ್ ಡಿ ಕಾರ್ಯಕ್ರಮ ನಿರೂಪಿಸಿದರು.