ಬಂಟ್ವಾಳ; ಕುಕಿ ಜೊ ಬುಡಕಟ್ಟು ಜಾತಿಗೆ ಸೇರಿದ ಇಬ್ಬರು ಮಹಿಳೆಯರ ದಾರುಣ ಕೃತ್ಯ ಖಂಡಿಸಿ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಕೇಂದ್ರ ಮೋದಿ ನೇತೃತ್ವದ ಸರಕಾರದ ನಿಲುವನ್ನು ಖಂಡಿಸಿ, ಮಣಿಪುರ ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಸಮಾನ ಮನಸ್ಕ ಸಂಘಟನೆ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬಿಸಿರೋಡು ಮೇಲು ಸೇತುವೆ ಬಳಿ ಪ್ರತಿಭಟನೆ ನಡೆಯಿತು.

ಕಳೆದ 79 ದಿನಗಳಿಂದೀಚೆಗೆ ಮಣಿಪುರ ರಾಜ್ಯದಲ್ಲಿ ಜನಾಂಗೀಯ ದ್ವೇಷ ಭುಗಿಲೆದ್ದು ಕೊಲೆ, ಸುಲಿಗೆ, ಅತ್ಯಾಚಾರದಂತಹ ಅಹಿತಕರ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಈಗಾಗಲೇ ಅಲ್ಲಿನ ಜನ ಜೀವನ ಅಸ್ತವ್ಯಸ್ಥವಾಗಿದೆ. ಮಣಿಪುರ ಗಲಭೆ, ಹಿಂಸಾಚಾರದ ಹಿಂದೆ ಬಿಜೆಪಿ ಸರಕಾರದ ಕೈವಾಡವಿದೆ. ಮಣಿಪುರ ಸರಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರದ ಮುಖ್ಯ ಮಂತ್ರಿ ಬಿರೆನ್ ಸಿಂಗ್ ಕೂಡಲೇ ರಾಜಿನಾಮೆ ನೀಡಬೇಕು ಹಾಗೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜ್ಯಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸದಾಶಿವ ಬಂಗೇರ, ಶ್ರೀಮತಿ ಫ್ಲೋಸಿ ಡಿಸೋಜಾ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಕೇಶವ ಪೂಜಾರಿ ಪಂಜಿಕಲ್ಲು, ಎಂ ಎಚ್ ಮುಸ್ತಫ, ಬಿ.ಎಂ ಪ್ರಭಾಕರ ದೈವಗುಡ್ಡೆ, ಪ್ರೇಮನಾಥ ಕೆ, ಇಸ್ಮಾಯಿಲ್ ಅರಬಿ, ಮ್ಯಾಕ್ಸಿಂ ಡಿಸೋಜಾ, ಹರೀಶ್ ಬಿಸಿರೋಡು, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಮೋಹನ್ ಅರಳ, ಕಿಶೋರ್ ಕುಮಾರ್ ಬಿಸಿರೋಡು, ಮ್ಯಾಥ್ಯೂ, ಪಿಲ್ಲು ಸಾಹೇಬ್, ಇಬ್ರಾಹಿಂ ಉಳಿ, ಆರ್ ಟಿ ಐ ಕಾರ್ಯಕರ್ತ ಜೆ.ಪಿ, ರಜಾಕ್ ಗುಂಪಕಲ್ಲು, ಫೆಲಿಕ್ಸ್ ಪಿರೇರಾ ಬೆದ್ರಗುಡ್ಡೆ, ಸೆಲಿಂ ಬೋಳಂಗಡಿ, ರಿಝ್ವಾನ್ ಬೋಳಂಗಡಿ ಮುಂತಾದವರು ವಹಿಸಿದ್ದರು.
ಪ್ರಾರಂಭದಲ್ಲಿ ಸಂಘಟನೆಯ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.