ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ವಿಶ್ವ ಪರಿಸರ ದಿನ

0

ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.


ಪರಿಸರದೊಂದಿಗೆ ಪ್ರತಿಯೊಂದು ಜೀವಿಗೂ ಭಾವನಾತ್ಮಕ ಸಂಬಂಧವಿದೆ.ಪೂರ್ವಜರು ಪರಿಸರವನ್ನು ಪ್ರೀತಿಸುತ್ತಿದ್ದರು.ಪೂಜನೀಯ ಭಾವನೆಯನ್ನು ಹೊಂದಿದ್ದರು.ಈ ರೀತಿಯಾಗಿ ಪರಿಸರ ಉಳಿಸುತ್ತಿದ್ದರು.ನಿಸ್ವಾರ್ಥ ಸೇವಾ ಮನೋಭಾವ ಹೊಂದಿರುವ ಈ ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಕೃಷಿ ಆರಂಭಿಸುವ ಮುನ್ನ ಭೂಮಿ ಪೂಜೆ, ನೀರಿಗೆ ಗಂಗಾಪೂಜೆ ಹೀಗೆ ಪಂಚಭೂತಗಳನ್ನು ಪೂಜಿಸುವ ಪುಣ್ಯಭೂಮಿ ಈ ಭಾರತ.ಆದರೆ ಪರಿಸರದ ಮಹತ್ವವನ್ನು ನಾವಿಂದು ಸ್ವತಃ ತಿಳಿದುಕೊಳ್ಳುತ್ತಿದ್ದೇವೆ. ಮಳೆಗಾಲದೊಂದಿಗೆ ಆಚರಿಸಬೇಕಾಗಿದ್ದ ಈ ವಿಶ್ವ ಪರಿಸರ ದಿನವನ್ನು ನಾವು ಇಂದು ಮಳೆಯ ಕೊರತೆ, ನೀರಿನ ಅಭಾವ, ಬಿಸಿಯಾದ ವಾತಾವರಣ, ಅತಿಯಾದ ಬಾಯಾರಿಕೆಯಿಂದ ಆಚರಿಸುತ್ತಿರುವುದು ವಿಪರ್‍ಯಾಸವೆಂದೆನಿಸುತ್ತಿದೆ.ಪರಿಸರದಲ್ಲಿ ಎಲ್ಲವೂ ಉಚಿತವಾಗಿ ದೊರೆಯುತ್ತದೆ.ಈ ಪ್ರಕೃತಿಯ ವರದಾನವನ್ನು ಕಾಳಜಿಯಿಂದ ಬಳಸಬೇಕು.ಜೀವನದಲ್ಲಿ ಪ್ರತಿಯೊಬ್ಬರು ಸ್ವತಃ ಪರಿಸರವನ್ನು ತಾನೇ ಉಳಿಸುತ್ತೇನೆ ಎಂಬ ಧ್ಯೇಯ ಹೊಂದಿದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ.ಪರಿಸರದ ಮಡಿಲಿನಲ್ಲಿ ನಾವೀದ್ದೇವೆ, ನಮ್ಮ ಮಡಿಲಿನಲ್ಲಿ ಪರಿಸರವಿಲ್ಲ ಎಂಬ ಎಚ್ಚರಿಕೆಯೊಂದಿಗೆ ಪರಿಸರದ ಮಹತ್ವವನ್ನು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಬಾಲಕೃಷ್ಣ ಹೇಳಿದರು.


ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ರವಿರಾಜ್‌ ಕಣಂತೂರು, ಅಧ್ಯಾಪಕಿ ಅನ್ನಪೂರ್ಣ ಎನ್ ಭಟ್ ಹಾಗೂ ರೂಪಕಲಾ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು 7ನೇ ತರಗತಿಯ ಆದಿತ್ಯ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here