ಅಮ್ಟೂರು: ಗ್ರಾಮದ ಶ್ರೀಕೃಷ್ಣ ಮಂದಿರದಲ್ಲಿ 23 ನೇ ವರ್ಷದ ವಾರ್ಷಿಕೋತ್ಸವ ದ.29ರಂದು ನೆರವೇರಿತು.ಬೆಳಿಗ್ಗೆ ಗಣಹೋಮ ಸಹಿತ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡ ಈ ವೈದಿಕ ಕಾರ್‍ಯಗಳನ್ನು ಅನಂತರಾಮ ಐತಾಳ್ ಓಣಿಬೈಲು ಇವರು ನಡೆಸಿಕೊಟ್ಟರು.
ನಂತರ ನಡೆದ ಸಭಾಕಾರ್‍ಯಕ್ರಮದಲ್ಲಿ ಜಗದ್ಗರು ಶ್ರೀ ಶಂಕರಾಚಾರ್‍ಯ ಸಂಸ್ಥಾನ, ಎಡನೀರು ಮಠ, ಕಾಸರಗೋಡು ಇಲ್ಲಿನ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಆಶೀರ್ವಚನ ಮಾಡುತ್ತಾ, ಭಗವದ್ಗೀತೆಯಲ್ಲಿ ತಿಳಿಸಿದಂತೆ ಅದರ ತತ್ವಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿಕೊಂಡು, ಅದನ್ನು ಅಳವಡಿಸಿಕೊಂಡು ಮುಂದುವರೆದರೆ ನಮ್ಮ ಜೀವನ ಸಾತ್ವಿಕತೆಯಿಂದ, ಮತ್ತು ಸತ್ಯತೆಯಿಂದ ಮುಂದುವರೆಯುತ್ತದೆ ಎಂದರು.
ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಲಕ್ಷ್ಮೀನಾರಾಯಣ ಭಟ್‌ವಹಿಸಿದ್ದರು.ಕಾರ್‍ಯಕ್ರಮದಲ್ಲಿ ಲಯನ್ ದಾಮೋದರ ಬಿ.ಎಂ., ಸಂಚಾಲಕರು, ಲಯನ್ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೆಂದ್ರ ಬಿ.ಸಿ.ರೋಡ್, ಮಂದಿರದ ಗೌರವಾಧ್ಯಕ್ಷರಾದ ಶಂಕರನಾರಾಯಣ ಐತಾಳ್ ಓಣಿಬೈಲು, ಮಹಿಳಾ ಮಂಡಲದ ಅಧ್ಯಕ್ಷರಾಗಿರುವ ಲಕ್ಷ್ಮೀ ವಿ. ಪ್ರಭು ಉಪಸ್ಥಿತರಿದ್ದರು.
ಕಾರ್‍ಯಕ್ರಮಕ್ಕೆ ಸಹಕರಿಸಿದ ಎಲ್ಲಾ ದಾನಿಗಳನ್ನು ಪೂಜ್ಯ ಸ್ವಾಮೀಜಿಯವರಿಂದ ಗೌರವಿಸಲಾಯಿತು.ಈ ಕಾರ್‍ಯಕ್ರಮವನ್ನು ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ ಇವರು ನಡೆಸಿಕೊಟ್ಟರು.
ಮಂದಿರದ ಕಾರ್‍ಯದರ್ಶಿ ಕುಶಾಲಪ್ಪ ಅಮ್ಟೂರು ಮಂದಿರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಕಾರ್‍ಯಕ್ರಮದ ಗಣ್ಯರನ್ನು ಸ್ವಾಗತಿಸಿದರು.
ರಾಜೇಶ್ ಕೊಟ್ಟಾರಿ ಕಾರ್‍ಯಕ್ರಮವನ್ನು ನಿರ್ವಹಿಸಿ, ಜಿತೇಶ್ ಶೆಟ್ಟಿ ಬಾಳಿಕೆ ವಂದಿಸಿದರು.
ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ಹಾಗೂ ಸಂಜೆ 6 ಗಂಟೆಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ನಾಗ ಸಂಜೀವನ ಎಂಬ ಯಕ್ಷಗಾನ ಬಯಲಾಟ ನೆರವೇರಿತು.