ಬಂಟ್ವಾಳ: 2023-24ನೇ ಸಾಲಿನ ಶೈಕ್ಷಣಿಕ ವರ್ಷದ ವಿವಿಧ ತಾಂತ್ರಿಕ ವಿಭಾಗಗಳ ಸೇರ್ಪಡೆಗಾಗಿ ಸಮಾಲೋಚನೆ ಸಭೆಯನ್ನು ದಿನಾಂಕ 10-07-2023ರ ಸೋಮವಾರದಂದು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ ಕಛೇರಿಗೆ ಬೇಟಿ ನೀಡಬಹುದಾಗಿದೆ. ಅದೇ ರೀತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಹೆತ್ತವರು/ಪೋಷಕರೊಂದಿಗೆ ಮೂಲ ದಾಖಲೆಗಳೊಂದಿಗೆ ಸಮಾಲೋಚನ ಸಭೆಗೆ ಖುದ್ದಾಗಿ ತಾ: 10-07-2023ರ ಸೋಮವಾರದಂದು ಬೆಳಿಗ್ಗೆ 10:00ಕ್ಕೆ ಹಾಜರಾಗಬೇಕಾಗಿ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎ ಐಟಿಐ ತುಂಬೆಯು ರಾಷ್ಟ್ರೀಯ ಶಿಕ್ಷಣ ಪರಿಷತ್ತು ನವದೆಹಲಿಯ ಶಾಶ್ವತ ಸಂಯೋಜನೆ ಹೊಂದಿದ್ದು ಕರ್ನಾಟಕ ಸರಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮಾನ್ಯತೆ ಪಡೆದಿದ್ದು, ಕಳೆದ ಹಲವಾರು ವರ್ಷಗಳಿಂದ ಇಲೆಕ್ಟ್ರಾನಿಕ್ ಮೆಕ್ಯಾನಿಕ್ (EM), ಡೀಸೆಲ್ ಮೆಕ್ಯಾನಿಕ್ (DM), ಎಸಿ ಮೆಕ್ಯಾನಿಕ್ (MRAC) ಹಾಗೂ ವೆಲ್ಡರ್ (Welder) ವಿಭಾಗದಲ್ಲಿ ತರಬೇತಿ ನೀಡುತ್ತಲಿದೆ.
ತರಬೇತಿಗಾಗಿ ಸರಕಾರದಿಂದ ವಿದ್ಯಾರ್ಥಿ ವೇತನದ ಸೌಲಭ್ಯವಿದ್ದು SC/ST ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಅರಿವು, ವಿದ್ಯಾಶ್ರೀ, ಬೀಡಿ, ಕಟ್ಟಡ ಕಾರ್ಮಿಕ, NSP/SSP ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ತರಬೇತಿಯ ಬಳಿಕ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.