ಬಂಟ್ವಾಳ : ಹದಿನೈದು ವರ್ಷಗಳಿಂದ ದೈವಚಾರಿಕರಾಗಿ ಸೇವೆ ಸಲ್ಲಿಸುತ್ತಿದ್ದ ಮಾಣಿ ಗ್ರಾಮದ ಚೆನ್ನಪ್ಪ ನಾಯ್ಕ್ ಹಳೀರರವರು ಆ.9ರಂದು ನಿಧನರಾದರು. ಮಹಮ್ಮಾಯಿದೈವಸ್ಥಾನ ಹಳೀರದಲ್ಲಿ ಅನೇಕ ವರ್ಷಗಳಿಂದ ಮಹಮ್ಮಾಯಿ ಅಮ್ಮನವರ ಪಾತ್ರಿಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದು, ಊರಜನರ ಮೆಚ್ಚುಗೆಗಳಿಸಿಕೊಂಡಿದ್ದರು.
ಮೃತರ ಪತ್ನಿ, ಮೂವರು ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಸ್ವಗೃಹದಲ್ಲಿ ಮೃತರ ಅಂತ್ಯಕ್ರಿಯೆ ವಿಧಿ ವಿಧಾನದ ಮೂಲಕ ನರವೇರಿತು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್‌ರೈ, ಗಡಿ ಪ್ರಧಾನರಾದ ಗುಡ್ಡ ಶೆಟ್ಟಿ , ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಧಾರ್ಮಿಕ ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಪಂಚಾಯತ್ ಸದಸ್ಯರಾದ ರಘುರಾಮ ಶೆಟ್ಟಿ ಸಾಗು-ಹೊಸಮನೆ, ಇಬ್ರಾಹಿಂ.ಕೆ.ಮಾಣಿ, ಜನಾರ್ದನ ಪೂಜಾರಿ ನಾರುಕೋಡಿ, ಮೆಲ್ವಿನ್‌ಕಿಶೋರ್ ಮಾರ್ಟಿಸ್, ಉದ್ಯಮಿ ನಾಗರಾಜ ಶೆಟ್ಟಿ ಸಾಗು ಮನೆಗೆ ಭೇಟಿ ನೀಡಿದ್ರು.