ತುಳು ನಾಟಕ ಕಲಾವಿದರ ಒಕ್ಕೂಟ, ಬಂಟ್ವಾಳ ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ

0

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ಬಂಟ್ವಾಳ ತಾಲೂಕು ಇದರ ವತಿಯಿಂದ ತುಳು ಭಾಷೆ, ತುಳು ರಂಗಭೂಮಿ ಹಾಗೂ ರಂಗ ಕಲಾವಿದರ ಅಭ್ಯುದಯಕ್ಕೋಸ್ಕರ ಅ.9ರಿಂದ ಅ.16ರವರೆಗೆ ಒಂದು ವಾರಗಳವರೆಗೆ ಬಿ.ಸಿ.ರೋಡ್ ಸ್ಪರ್ಶಾ ಕಲಾಮಂದಿರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ತುಳು ನಾಟಕ ಸ್ಪರ್ಧೆ ಏರ್ಪಡಿಸಲಾಗಿದ್ದು, ನಾಟಕ ತಂಡಗಳನ್ನು ಆಹ್ವಾನಿಸಲಾಗಿದೆ.
ಭಾಗವಹಿಸುವ ತಂಡಗಳು ಆಗಸ್ಟ್ ೨೫ ತಾರೀಖಿನ ಮುಂಚಿತವಾಗಿ ಹೆಸರು ನೊಂದಾಯಿಸಬೇಕು.ಆಯ್ದ ಏಳು ತಂಡಗಳಿಗೆ ಅವಕಾಶ ನೀಡಲಾಗುವುದು. ಈ ಮೊದಲು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ನಾಟಕಕ್ಕೆ ಅವಕಾಶವಿಲ್ಲ. ಭಾಗವಹಿಸುವ ಕಲಾವಿದರು ನಾಟಕ, ಕರ್ತೃ, ನಿರ್ದೇಶಕರು, ಬಂಟ್ವಾಳ ತಾಲೂಕು ವ್ಯಾಪ್ತಿಯವರೇ ಆಗಿರಬೇಕು.ಸಂಗೀತ ಕಲಾವಿದರಿಗೆ ವಿನಾಯಿತಿ ಇದೆ. ತುಳು ಸಾಮಾಜಿಕ, ನೀತಿ ಬೋಧಕ ನಾಟಕಕ್ಕೆ ಆದ್ಯತೆ ನೀಡಲಾಗುವುದು.ಯಾವುದೇ ಧರ್ಮ,ವ್ಯಕ್ತಿ, ಜಾತಿನಿಂದನೆಗೆ ಅವಕಾಶವಿಲ್ಲ. ವಿಜೇತ ತಂಡಗಳಿಗೆ ಪ್ರಥಮ ರೂ.25,000, ದ್ವಿತೀಯ ರೂ.20,000, ತೃತೀಯ ರೂ. 15,000, ನಗದು ಸಹಿತ ಪ್ರಶಸ್ತಿ ಪತ್ರ, ಪಾರಿತೋಷಕ ನೀಡಲಾಗುವುದು.
ಆಸಕ್ತ ತಂಡಗಳು ರತ್ನದೇವ್ ಪುಂಜಾಲಕಟ್ಟೆ-9449189506 ಸುಭಾಶ್ಚಂದ್ರ ಜೈನ್-9448869256 ಅವರನ್ನು ಸಂಪರ್ಕಿಸಬಹುದು ಎಂದು ಒಕ್ಕೂಟ ತಾಲೂಕು ಸಂಚಾಲಕ ಸುಭಾಶ್ಚಂದ್ರ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here