ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಗುಳಿಯ ಇದರ ಬ್ರಹ್ಮಕಲಶೋತ್ಸವ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಶ್ರೀ ಚಂಡಿಕಾ ಹವನವು ಫೆ. 27 ರಂದು ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೈದಿಕ ವಿಧಿ ವಿಧಾನಗಳು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯಿಂದ ಜರಗಲಿದೆ.
ಕಾರ್ಯಕ್ರಮ ಫೆ. 27 ರಂದು ಬೆಳಗ್ಗೆ ಪುಣ್ಯಾಹ, ಪಂಚಗವ್ಯ, ಗಣಹೋಮ, ಪವಮಾನ ಸೂಕ್ತಾಭಿಷೇಕ, ನಾಗತಂಬಿಲ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 5 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಗಂಟೆ 7.45 ರಿಂದ ಕಾರ್ತಿಕ ಪೂಜೆ, ರಂಗಪೂಜೆ, ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬೆಳಗ್ಗೆ 8 ಗಂಟೆಗೆ ವೇದಮೂರ್ತಿ ಶ್ರೀ ವಿಷ್ಣು ಉಪಾಧ್ಯಾಯ ಕುಂದಾಯಗೋಳಿ ಇವರ ನೇತೃತ್ವದಲ್ಲಿ ಚಂಡಿಕಾ ಹವನ ಆರಂಭ, ಸಂಜೆ 6 ರಿಂದ 7 ಗಂಟೆಯ ವರೆಗೆ ಭಜನಾ ಸಂಕೀರ್ತನೆ, ರಾತ್ರಿ ಗಂಟೆ 9 ರಿಂದ ಗೀತ ಸಾಹಿತ್ಯ ಸಂಭ್ರಮವು ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಅದ್ರಕ್ಕು ಪ್ರಕಟನೆಯಲ್ಲಿ ತಿಳಿಸಿದ್ದಾರೆ.