ಫೆ.25:ಸಜೀಪಮೂಡ- ಶ್ರೀ ಶಾರದಾ ಸಮುದಾಯ ಭವನ ಉದ್ಘಾಟನಾ ಸಮಾರಂಭ

0

ಬಂಟ್ವಾಳ : ಸಜೀಪಮೂಡ ಗ್ರಾಮದ ಶ್ರೀ ಶಾರದಾ ಮಂದಿರ ನಗ್ರಿ ಇದರ ವಠಾರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಾರದಾ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಫೆ. 25ರಂದು ಸಂಜೆ 6 ಗಂಟೆಗೆ ಜರಗಲಿದೆ.


ಕಾರ್ಯಕ್ರಮ ಫೆ. 21ರಿಂದ ವಿವಿಧ ಕಾರ್ಯಕ್ರಮಗಳು ನಡದಿದ್ದು ಫೆ. 25ರಂದು ಅಪರಾಹ್ನ 3 ರಿಂದ ಶ್ರೀ ಶಾರದಾ ಮಹಿಳಾ ಸಮಿತಿ ನಗ್ರಿ ಇವರ ಸಹಯೋಗದೊಂದಿಗೆ ಸ್ಥಳೀಯ ಬಾಲ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ , ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ, ರಾತ್ರಿ ಗಂಟೆ 8.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here