ಬಂಟ್ವಾಳ ಫೆ. 12: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 10 ನೇ ಶಾಖೆಯನ್ನು ಕಾವಳಮೂಡೂರು ಗ್ರಾಮದ ಯನ್. ಸಿ. ರೋಡ್ ನ ತೌಹೀದ್ ಕಾಂಪ್ಲೆಕ್ಸ್ ನಲ್ಲಿ ಫೆ.12 ರಂದು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ಬಿಲ್ಲವ ಸಮಾಜದಲ್ಲಿ ಮೂವತ್ತು ವರ್ಷಗಳ ಹಿಂದೆ ಆರ್ಥಿಕ ಚಿಂತನೆಯ ಬೀಜವನ್ನು ಬಿತ್ತಿದವರು ಸಹಕಾರಿಯ ಅಧ್ಯಕ್ಷ ಕೆ. ಸಂಜೀವ ಪೂಜಾರಿ . ಅಂದಿನ ಕನಸು ಇಂದು ನನಸಾಗಿದೆ.. ಗ್ರಾಹಕರು ಸಹಕಾರಿಯ ದೇವರು. ಇನ್ನಷ್ಟು ಶಾಖೆಗಳನ್ನು ಮಾಡುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಹಕಾರಿಯ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ ಮೂವತ್ತು ವರ್ಷಗಳ ಹಿಂದೆ ಸಂಘವು ಸ್ಥಾಪನೆ ಆಗಿತ್ತು. ಪ್ರಸ್ತುತ 25 ಶೇ. ಡಿವಿಡೆಂಡ್ ನೀಡುವಷ್ಟು ಬೆಳೆದಿದೆ. ಸಾಲ ಪಡೆಯಲು ಸಾಧ್ಯ ವಾಗದ ಮ೦ದಿಗೆ ಆರ್ಥಿಕ ನೆರವು’ ಮಹಿಳೆಯರಿಗೆ ವಿಶೇಷ ಸಾಲದ ನೆರವು. ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗ ನೀಡುತ್ತದೆ. ಮುಂದಿನ ಎರಡು ವರ್ಷದಲ್ಲಿ 25 ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ. ಗ್ರಾಹಕರ ಮನೆಗೆ ಬಂದು ಠೇವಣಿ ಸ್ವೀಕಾರ ಮಾಡುತ್ತೇವೆ. ಬಡ್ಡಿಯನ್ನು ಮನೆಗೆ ಮುಟ್ಟಿಸುವ ಕೆಲಸ ಆಗುವುದು ಎಂದರು.
ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ ಸಹಕಾರಿಯ ಸೇವೆಯನ್ನು ಪಡೆದು ಜನರು ಅಭಿವದ್ದಿ ಆಗಬೇಕು. ಆರ್ಥಿಕ ಸಹಾಯವನ್ನು ಸಹಕಾರಿಯಿಂದ ಪಡೆಯಿರಿ. ಸಾಲ ಪಡೆದು ಅದನ್ನು ಸರಿಯಾಗಿ ಹಿಂದೆ ನೀಡಿ ಒಳ್ಳೆಯ ಗ್ರಾಹಕರಾಗಿ ಎಂದು ಕರೆ ನೀಡಿದರು.
ಬೆಳ್ತಂಗಡಿ ತಾಲೂಕು ಗುರುದೇವ ವಿವಿದೋದ್ದೇಶ.ಸಹಕಾರಿ ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆಂತ್ಯಾರ್ ಸಹಕಾರಿಯ ಭದ್ರತಾ ಕೋಶ ಉದ್ವಾಟಿಸಿ ಮಾತನಾಡಿ ಗ್ರಾಮೀಣ ಮಟ್ಟಕ್ಕೆ ಈ ಸಹಕಾರಿಯು ಹೆಚ್ಚಿನ ಒತ್ತು ನೀಡುತ್ತಿದೆ. ಅಧ್ಯಕ್ಷರ -ಸಾಧನೆ ಅಭಿನಂದನೀಯ. ಇನ್ನಷ್ಟು ಶಾಖೆಗಳು ಬರಲಿ ಎಂದರು.
ವಿಶ್ವನಾಥ ಪೂಜಾರಿ ಪೀರ್ದೋಟ್ಟು ಮತ್ತು ಗ್ರಾ.ಪಂ .ಸರಸ್ಯ ಶೇಷಗಿರಿ ಪೂಜಾರಿ ಠೇವಣಿ ಪತ್ರ ವಿತರಿಸಿದರು.
ವಿಶ್ರಾಂತ ಉಪ ತಹಶೀಲ್ದಾರ್ ಲೊಕೇಶ್ ಪೂಜಾರಿ ಮಾತನಾಡಿ ನಮ್ಮಲ್ಲಿಗೆ ಒಳ್ಳೆಯ ಸಹಕಾರಿ ಸಂಘ ಬಂದಿದೆ. ಅದನ್ನು ಬಳಸಿಕೊಳ್ಳುವ ಎಂದರು. ಗ್ರಾ.ಪಂ. ಸದಸ್ಯೆ ರೇವತಿ, ಕಟ್ಟಡ ಮಾಲಕ ಅಬ್ದುಲ್ ರಝಾಕ್ , ಸಹಕಾರಿಯ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ರಮೇಶ ಅನ್ನಪ್ಪಾಡಿ, ವಿಠಲ ಬೆಳ್ಯಾಡ ಚೇಳೂರು, ಅಶೋಕ ಪೂಜಾರಿ ಕೋಮಾಲಿ, ಜಯಶಂಕರ ಕಾನ್ಸಾಲೆ, ಕೆ. ಸುಜಾತ ಎಂ, ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಕ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಗುತ್ತಿನಬೈಲು ಚೇಲೂರು, ಶಾಖಾಧಿಕಾರಿ ಅಶ್ವಿತ ಸಿದ್ದ ಕಟ್ಟೆ ಉಪಸ್ಥಿತರಿದ್ದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.