ಬಂಟ್ವಾಳ : ಇರಾ ಗ್ರಾಮದ ನಾಯರ್ಮಜಲ್ ತಿರುವಾಲೆ ದಿ / ವಾಮನ ಪೂಜಾರಿಯವರ ಪುತ್ರ ರವೀಂದ್ರ ಪೂಜಾರಿ (56 ವರ್ಷ ) ಯವರು ಎ.8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ವೃತ್ತಿಯಲ್ಲಿ ಟೈಲರ್ ಆಗಿ ಮಂಚಿ- ಕುಕ್ಕಾಜೆ ಪೇಟೆಯಲ್ಲಿ ಹಲವು ವರ್ಷಗಳಲ್ಲಿ ಟೈಲರ್ ಅಂಗಡಿಯನ್ನು ನಡೆಸಿದ್ದರು.
ಪ್ರಸಕ್ತ ಮನೆಯಲ್ಲಿ ಸಂಸಾರದೊಂದಿಗೆ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರಾದ ಸೀತಾರಾಮ ಪೂಜಾರಿ, ಮೋಹನ ಪೂಜಾರಿ, ಗಂಗಾಧರ ಪೂಜಾರಿ, ಮತ್ತು ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.