ವಿಟ್ಲ: ಪಾಣೆಮಂಗಳೂರು ಬ್ಲಾಕ್ ನ 2023ರ ಸಾರ್ವತ್ರಿಕ ಚುನಾವಣಾ ಉಸ್ತುವಾರಿಯಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ನೇಮಕ ಮಾಡಿ ಆದೇಶಿಸಿರುತ್ತಾರೆ.
ಕುಳಾಲು ಸುಭಾಶ್ಚಂದ್ರ ಶೆಟ್ಟಿರವರು ಈ ಹಿಂದೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕ ದ.ಕ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ ಅಲ್ಲದೆ ಜಿಲ್ಲೆಯ ವಿವಿಧ ಸಂಘಟನೆಯ ಪಧಾದಿಕಾರಿಯಾಗಿರುವ ಇವರು ಉತ್ತಮ ಸಂಘಟಕರಾಗಿದ್ದು, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದಾರೆ.