ಬಂಟ್ವಾಳ ಫೆ. 10: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 10ನೇ ಕಾವಳಮೂಡೂರು ಶಾಖೆಯು ಇಲ್ಲಿನ ಎನ್.ಸಿ. ರೋಡ್ ತೌಹೀದ್ ಕಾಂಪ್ಲೆಕ್ಸ್‌ನಲ್ಲಿ ಫೆ. 12ರಂದು ಬೆಳಗ್ಗೆ 10 ಗಂಟೆಗೆ ಶುಭರಂಭಗೊಳ್ಳಲಿದೆ.
ಸಂಘವು ಒಂಬತ್ತು ಶಾಖೆಗಳನ್ನು ಹೊಂದಿದ್ದು ಹತ್ತನೇ ಶಾಖೆಗೆ ಚಾಲನೆ ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದೆ. ಸಹಕಾರಿಯು ಮೂರ್ತೆದಾರರ ಸಾಲ, ಆಭರಣ ಸಾಲ, ವಾಹನ ಸಾಲ, ಗೃಹ ಸಾಲ, ವ್ಯಾಪಾರ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಕೃಷಿಯೇತರ ಸಾಲ, ಸ್ವ-ಸಹಾಯ ಸಾಲಗಳನ್ನು ನೀಡುವುದು.
ಸಾಮಾಜಿಕ ಸೇವಾಕರ್ತ ಕೆ. ಸಂಜೀವ ಪೂಜಾರಿ
ಸಾಮಾಜಿಕ ಸೇವಾಕರ್ತನಾಗಿ ಗುರುತಿಸಿಕೊಂಡು ಬೆಳೆದು ಬಂದಿರುವ ಕುಚ್ಚಿಗುಡ್ಡೆ ಸಂಜೀವ ಪೂಜಾರಿ ಅವರು ಸಹಕಾರಿಯ ಆರಂಭದಿಂದ ಅಧ್ಯಕ್ಷರಾಗಿದ್ದು ಕಳೆದ 17 ವರ್ಷಗಳಿಂದ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿ ಅದರ ಎಲ್ಲಾ ಬೆಳವಣಿಗೆಯ ಸೂತ್ರದಾರಿಯಾಗಿ ಕೆಲಸ ಮಾಡಿದ್ದಾರೆ.
ಗರಿಷ್ಟ ಪ್ರಮಾಣದ ಡಿವಿಡೆಂಡ್ ಹಂಚಿಕೆಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಸಹಕಾರಿಯಾಗಿದೆ. ರಾಜಕೀಯ,ಉದ್ಯಮ ,ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸಾಧಕನಾಗಿ,
ಕೊಡುಗೈ ದಾನಿ, ಸಂಘಟನಾ ಚತುರನಾಗಿ ಗುರುತಿಸಿಕೊಂಡಿದ್ದಾರೆ.
ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ, ಶ್ರೀ ಗುರು ಕೋ-ಅಪರೇಟಿವ್
ಸೊಸೈಟಿ ನಿರ್ದೇಶಕರಾಗಿ, ಗೆಜ್ಜೆಗಿರಿ ನಂದನಬಿತ್ತಿಲ್ ಶ್ರೀ ಕೋಟಿ ಚೆನ್ನಯ ದೇಯಿಬೈದೆತಿ ಮೂಲಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯರು, ನಮ್ಮ ಬಿರುವೆರ್ ಒಕ್ಕೂಟದ ಗೌರವ ಅಧ್ಯಕ್ಷರು. ಸುರಭಿ ಬೀಡಿ ಮಾಲಕರು, ಮೆಲ್ಕಾರಾಗಿ, ಮೆಲ್ಕಾರ್, ಉಪ್ಪಿನಂಗಡಿ, ಪುತ್ತೂರುಗಳಲ್ಲಿ ಬಿರ್ವ ಸೆಂಟರ್ ಬಾರ್ ಮತ್ತು ರೆಸ್ಟೋರೆಂಟ್ ವ್ಯವಹಾರವನ್ನು ಹೊಂದಿದ್ದು , ಜನಸ್ನೇಹಿ ರಾಜಕಾರಣಿಯೆಂದು ಗುರುತಿಸಲ್ಪಟ್ಟವರು.