ಬಂಟ್ವಾಳ : ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ತಾಲೂಕು ಕಾನೂನು ಸೇವಗಳ ಸಮಿತಿ, ಬಂಟ್ವಾಳ,ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಡಿ.7 ರಂದು ನಡೆಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇಲ್ಲಿ ಚಂದ್ರಶೇಖರ ವೈ.ತಳವಾರ, ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಜೆ ಎಮ್ ಎಫ್ ಸಿ ಬಂಟ್ವಾಳ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಾನೂನಿನ ಮಹತ್ವದ ಬಗ್ಗೆ ತಿಳಿ ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಧೀಶ ಕೃಷ್ಣ ಮೂರ್ತಿ ಎನ್, ಗೌರವ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಬೆಂಜನಪದವು ಪ್ರಾಂಶುಪಾಲೆ ಕವಿತಾ ಹೇಮಚಂದ್ರ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರು ಮತ್ತು ಮಾನವಹಕ್ಕುಗಳ ಹೋರಾಟಗಾರರ ರವೀಂದ್ರ ಕುಕ್ಕಾಜೆ, ಮಾನವ ಹಕ್ಕುಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿ, ಮಾನವ ಹಕ್ಕುಗಳ ಉಲ್ಲಂಘನೆ ಯಾವ ಸಂದರ್ಭದಲ್ಲಿ ಆಗುತ್ತೆ, ಆವಾಗ ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿಸಿ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಜೊತೆ ಕಾರ್ಯದರ್ಶಿ ಬಂಟ್ವಾಳ ವಕೀಲರ ಸಂಘದ ಸರೀತಾ ಪೇರಾವೋ , ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಿ ಕುಮಾರಿ ಡಿ, ಬಾಲಕೃಷ್ಣ ಎನ್ ವಿ.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,ಬೆಂಜನಪದವು, ಹಿಂದಿ ಸಹ ಶಿಕ್ಷಕಿ ಶ್ರೀ ದೇವಿ, ಬೆಂಜನಪದವು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಂದನೆಯನ್ನು ರವಿಚಂದ್ರಮಯ್ಯ,ನಿರೂಪಣೆಯನ್ನು ನೂರ್ ಮಹಮ್ಮದ್ ನಡೆಸಿಕೊಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಇದರ ಸದುಪಯೋಗವನ್ನು ಪಡೆದು ಕೊಂಡರು.