ಬಂಟ್ವಾಳ:ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಶಿಸ್ತುಬದ್ಧ ಕಬಡ್ಡಿ ಕ್ರೀಡೆ ಪ್ರಸಕ್ತ ದೇಶದಾದ್ಯಂತ ಗಮನ ಸೆಳೆದಿರುವ ದೈಹಿಕ ಮತ್ತು ಮಾನಸಿಕ ಆರೋಗ್ಯದಾಯಕ ಕ್ರೀಡೆಯಾಗಿಯೂ ಗುರುತಿಸಿಕೊಂಡಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ಸೆ.11ರಂದು ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನ್ ದೇವ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಅಳಕೆ, ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ವರ್ತಕರ ಸೇವಾ ಸಹಕಾರಿ ಸಂಘದ ಶಾಖಾಧಿಕಾರಿ ಮೋಹನ ಜಿ.ಮೂಲ್ಯ ಶುಭ ಹಾರೈಸಿದರು. ಪ್ರಮುಖರಾದ ಹರೀಶ ಆಚಾರ್ಯ ರಾಯಿ, ಪ್ರಜ್ವಲ್ ಎಸ್.ಮಂಗಳೂರು, ಸಂದೇಶ ಶೆಟ್ಟಿ ಮಂಗಳೂರು, ಜಗದೀಶ ಶೆಟ್ಟಿ ಮಾವಂತೂರು, ದಿನೇಶ ಶೆಟ್ಟಿ ದಂಬೆದಾರು, ವಕೀಲ ಸಂದೇಶ ಶೆಟ್ಟಿ ಪೊಡುಂಬ, ತೀರ್ಪುಗಾರ ಸಾಯಿರಾಂ ತುಂಬೆ, ನವೀನ್ ಹೆಗ್ಡೆ ಮೂಡುಬಿದ್ರೆ, ಸಂಸ್ಥೆ ಸಂಚಾಲಕ ವಿಜಯ ಕುಮಾರ್ ಚೌಟ, ಕಾರ್ಯದರ್ಶಿ ಸಬಿತಾ ಲವಿನಾ ಪಿಂಟೋ, ಮುಖ್ಯಶಿಕ್ಷಕ ಗಿಲ್ಬಟ್ ಡಿಸೋಜ ಮತ್ತಿತರರು ಇದ್ದರು. ಕಾಲೇಜಿನ ಪ್ರಾಂಶುಪಾಲೆ ಪೂಜಾ ಸ್ವಾಗತಿಸಿ, ಪ್ರಾಧ್ಯಾಪಕಿ ಜ್ಯೋತಿ ವಂದಿಸಿದರು.