ಬಂಟ್ವಾಳ: ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ಚೈತನ್ಯ ವೃದ್ಧಿಗೆ ಅಲ್ಲಿನ ವಿನ್ಯಾಸ ಮತ್ತು ಭಕ್ತರ ಪ್ರೀತಿಯ ನಂಬಿಕೆ ಜೊತೆಗೆ ನಿಗದಿತ ಸಮಯದಲ್ಲಿ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ನೆರವೇರಿಸುವ ಅಗತ್ಯವಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ರೂ 2ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಭಕ್ತರ ಸಂಘಟಿತ ಪ್ರಯತ್ನದಿಂದ ದೇವಳ ಅಭಿವೃದ್ಧಿ ಜೊತೆಗೆ ದೇವರ ಆಶೀರ್ವಾದ ಮತ್ತು ಅನುಗ್ರಹ ಲಭಿಸುತ್ತದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಳದ ಪ್ರಗತಿಗೆ ಗ್ರಾಮಸ್ಥರ ಸಹಕಾರ ಅಗತ್ಯವಿದೆ ಎಂದರು.
ಉದ್ಯಮಿ ಬಿ.ರಘುನಾಥ ಸೋಮಯಾಜಿ, ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಇಂದಿರೇಶ್ ಶುಭ ಹಾರೈಸಿದರು. ವಕೀಲ ಅಶ್ವನಿ ಕುಮಾರ್ ರೈ, ಪ್ರಮುಖರಾದ ಸದಾನಂದ ಶೆಟ್ಟಿ ರಂಗೋಲಿ, ಕೃಷ್ಣಪ್ಪ ಕುಲಾಲ್, ಜಯರಾಮ ಶೆಟ್ಟಿ, ಸತೀಶ ಶೆಟ್ಟಿ ಕುಳತ್ತಬೆಟ್ಟು, ಬಿ.ಮೋಹನ್, ಚರಣ್ ಜುಮಾದಿಗುಡ್ಡೆ, ಬಾಬಾ ಅಲೆತ್ತೂರು, ರಮೇಶ್ ಶೆಣೈ, ಗೋಪಾಲ ಸುವರ್ಣ, ಭಾಸ್ಕರ ಟೈಲರ್, ಸೋಮನಾಥ ನಾಯ್ಡು, ಮಹಾಬಲೇಶ್ವರ ಹೆಬ್ಬಾರ್, ನೀಲೋಜಿ ರಾವ್, ಪ್ರಶಾಂತ್ ಬಿ.ಸಿ.ರೋಡು ಮತ್ತಿತರರು ಇದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಸ್ವಾಗತಿಸಿ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ಪ್ರಾಸ್ತಾವಿಕ ಮಾತನಾಡಿದರು. ಐತ್ತಪ್ಪ ಪೂಜಾರಿ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.