ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ 900 ಕಿಲೋ ಧವಸಧಾನ್ಯ ಹಾಗೂ ಪುಷ್ಪಗಳಿಂದ ರೂಪಿಸಿದ ತಿರಂಗಾ ಕಲಾಕೃತಿಯನ್ನು ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ಅವರು ಸೋಮವಾರ(ಆ.15) ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹರ್‌ಘರ್ ತಿರಂಗ ಅಭಿಯಾನ ಯಶಸ್ವಿಯಾಗಿ ಸಾಕಾರವಾಗಿದೆ. ಈ ಪೈಕಿ ಕುದ್ರೋಳಿ ಕ್ಷೇತ್ರದಲ್ಲಿ ದೇಶಾಭಿಮಾನ ಬಿಂಬಿಸುವ ತಿರಂಗಾ ಕಲಾಕೃತಿ ರೂಪಿಸಿರುವುದು ಶ್ಲಾಘನೀಯ ಕಾರ್ಯ. ಧವಸಧಾನ್ಯವನ್ನೇ ಬಳಸಿಕೊಂಡು ಕ್ರಿಯಾಶೀಲ ಮಾದರಿಯಲ್ಲಿ ತಿರಂಗ ರೂಪಿಸಿರುವುದು ಅಭಿನಂದನೀಯ ಎಂದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.