ಮಂಗಳೂರು: 75ರ ಸ್ವಾತಂತ್ರ್ಯದ ಹಬ್ಬ ದೇಶ, ವಿದೇಶಗಳಲ್ಲಿ ನಾನಾ ತೆರನಾಗಿ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಭಿನ್ನ ವಿಭಿನ್ನ ಆಲೋಚನೆಗಳೊಂದಿಗೆ ಅನೇಕ ಸಂಘ, ಸಂಸ್ಥೆ, ದೇಶಿಗರು ಹಬ್ಬದೌತನವನ್ನು ಮಾಡಿದ್ದಾರೆ. ಅಂತೆಯೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯವು ವಿಶೇಷವಾಗಿ ಗಮನಸೆಳೆಯಿತು.
ಸುಮಾರು 900 ಕೆ.ಜಿ ಧಾನ್ಯಗಳಿಂದ, 100ಕೆ.ಜಿ ತರಕಾರಿ, 54ಕಳಸ, 108 ಬಾಳೆಎಲೆ, 500ವೀಳ್ಯೆದೆಲೆ, 100 ಕೆ.ಜಿ ಬೆಳ್ತಿಗೆ ಅಕ್ಕಿಯಿಂದ 38ಅಡಿ ವೃತ್ತದಲ್ಲಿ ಭಾರತದ ತಿರಂಗಾ ಬಹಳ ಮನಮೋಹಕವಾಗಿ ಗಮನ ಸೆಳೆದಿತ್ತು. ಕಲಾವಿದ, ಛಾಯಗ್ರಾಹಕ ಪುನೀತ್ ಶೆಟ್ಟಿ ಹಾಗೂ ಗುರುಬೆಳದಿಂಗಳ ಸದಸ್ಯರು, ಕ್ಷೇತ್ರದ ಸಿಬ್ಬಂದಿ ವರ್ಗದ ಸಹಕಾರದಿಂದ ಬರೋಬ್ಬರಿ 18ಗಂಟೆಗಳ ನಿರಂತರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಸಚಿವರು, ಶ್ರೀ ಕ್ಷೇತ್ರ ರೂವಾರಿ ಬಿ ಜನಾರ್ದನ ಪೂಜಾರಿ ಸುಂದರ ಕಲೆಗೆ ಚಾಲನೆಯಿತ್ತರು. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಕಲೆಯನ್ನು ಮೆಚ್ಚಿ ಶ್ಲಾಘಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೋ, ಕಾರ್ಪೊರೇಟರ್ ಅನಿಲ್ ಕುಮಾರ್, ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಗೌರವಿ ಪಿ.ಕೆ, ಕೃತಿನ್ ಧೀರಜ್ ಅಮೀನ್, ಗುರುಬೆಳದಿಂಗಳು ಸದಸ್ಯರಾದ ಗಜೇಂದ್ರ ಪೂಜಾರಿ, ರಾಜೇಶ್ ಸುವರ್ಣ, ಅನುಸೂಯ ಸಚಿನ್, ಪ್ರವೀಣ್ ಅಂಚನ್, ಪ್ರಮೋದ್ ಕೋಟ್ಯಾನ್, ಚಿತ್ತರಂಜನ್ ಕಂಕನಾಡಿ ಗರೋಡಿ, ಶೈಲೇಂದ್ರ ವೈ. ಸುವರ್ಣ, ರವಿ ಪೂಜಾರಿ ಚಿಲಿಂಬಿ, ಜಯರಾಮ ಕಾರಂದೂರು, ರಾಜೇಂದ್ರ ಚಿಲಿಂಬಿ, ನವೀನ್ ಸುವರ್ಣ, ಜಯಾನಂದ ಪೂಜಾರಿ, ಮ್ಯಾನೇಜರ್ ವಿನೀತ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳಿಂದ ಮೆಚ್ಚುಗೆ:
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕುದ್ರೋಳಿ ಕ್ಷೇತ್ರದಲ್ಲಿ 38ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ತಿರಂಗಾ ಕಲಾಕೃತಿಯ ವೈಶಿಷ್ಟ್ಯವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.