ಒಡಿಯೂರು ಸಂಸ್ಥಾನದಲ್ಲಿ ಶನಿಪ್ರದೋಷದ ಪ್ರಯುಕ್ತ ಸಾಮೂಹಿಕ ಶನೈಶ್ಚರ ಪೂಜೆ

0

ಶನಿಯ ಪರಿಹಾರಕ್ಕಾಗಿ ಆರಾಧನೆ ಅಗತ್ಯ: ಒಡಿಯೂರು ಶ್ರೀ

ವಿಟ್ಲ: ಶಿವನು ಎಲ್ಲರೊಳಗಿರುವಾಗ ಎಲ್ಲರಿಗೂ ಬೇರೆಬೇರೆ ಹೆಸರುಗಳು ಇರುತ್ತವೆ. ಆದರೆ ಶಿವನು ಶರೀರದಿಂದ ಹೊರಟಮೇಲೆ ಎಲ್ಲರಿಗೂ ಒಂದೇ ಹೆಸರಿರುತ್ತದೆ. ಆದ್ದರಿಂದ ಅನೇಕ ಹೆಸರಿದ್ದರೂ ಕೂಡ ವಿಷಯಗಳು ಒಂದೇ ಆಗಿರುತ್ತದೆ. ಶಿವರಾತ್ರಿಯ ದಿನವಾದ ಇಂದು ಇಲ್ಲಿ ಶನಿಶ್ಚರರನ್ನು ಆರಾಧನೆ ಮಾಡಿದ್ದೇವೆ. ಶನಿಯ ಬಗ್ಗೆ ಭಯಬೇಡ. ಶನಿಶ್ಚರನ ಆರಾಧನೆಯಿಂದ ಶನಿಗ್ರಹಾಚಾರ ದೂರವಾದೀತು. ಶನಿಯ ಪರಿಹಾರಕ್ಕಾಗಿ ಆರಾಧನೆ ಅಗತ್ಯ. ನಮ್ಮೊಳಗಿನ ಶತ್ರುವನ್ನು ಮೆಟ್ಟಿನಿಲ್ಲುವ ಕೆಲಸವಾಗಬೇಕು. ನಮ್ಮೊಡಲಲ್ಲಿ ರಾಗ ಧ್ವೇಷಗಳು ದೂರವಾಗಿ ಪ್ರೀತಿ ಭಾವನೆಯನ್ನು ತುಂಬಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಫೆ.೧೮ರಂದು ಸಂಸ್ಥಾನದಲ್ಲಿ ಶನಿಪ್ರದೋಷದ ಪ್ರಯುಕ್ತ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಬಳಿಕ ಆಶೀರ್ವಚನ ನೀಡಿದರು.

ಮನುಷ್ಯ ಜನ್ಮವನ್ನು ಭಗವಂತ ನೀಡಿದ್ದಾನೆ. ಬುದ್ದಿ, ವಿವೇಕ ಜ್ಞಾನವನ್ನು ನೀಡಿದ್ದಾನೆ. ದೇವರು ನೀಡಿದ ಜನ್ಮವನ್ನು ಬುದ್ಧಿ, ವಿವೇಕ, ಜ್ಞಾನವನ್ನು ಬಳಸಿಕೊಂಡು ಸಾರ್ಥಕ್ಯ ಮಾಡಬೇಕು. ನಮ್ಮ ಬದುಕಿಗೆ ಶಾಂತಿ ನೆಮ್ಮದಿಯ ಅವಶ್ಯಕಥೆ ಬಹಳಷ್ಟಿದೆ. ಈಗಿನ ಕಾಲದಲ್ಲಿ ಆನ್ಲೈನ್ ಹಾಗು ಆಫ್ಲೈನ್ ನ ಬಗ್ಗೆ ಜಾಗೃತರಾಗುವ ಜೊತೆಗೆ ನಮ್ಮ ಲೈಫ್ಲೈನ್ ಬಗ್ಗೆ ಎಚ್ಚರದಿಂದಿರಬೇಕು. ಸಂಸ್ಕಾರ ಕೊಡುವ ಕೆಲಸವನ್ನು ನಮ್ಮ ಶ್ರದ್ಧಾಕೇಂದ್ರಗಳು ಮಾಡುತ್ತಿದೆ. ನಮ್ಮ ಬದುಕನ್ನು ರೂಪಿಸುವ ವಿಧಾನವನ್ನು ನಾವು ಜೀವನದಲ್ಲಿ ಅಳವಡಿಸಬೇಕು. ಶಿಕ್ಷಣದ ಕೊರತೆಯಿಂದಾಗಿ ನಾವು ದಾರಿತಪ್ಪುತ್ತಿದ್ದೇವೆ. ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ನಾವೆಲ್ಲರೂ ಜಾಗೃತರಾಗಬೇಕಾದ ಕಾಲಘಟ್ಟದಲ್ಲಿದ್ದೇವೆ. ಹುಟ್ಟು ಮತ್ತು ಸಾವು ಎನ್ನುವುದು ಮನುಷ್ಯ ಜೀವನದಲ್ಲಿ ಇದ್ದೇ ಇದೆ. ನಮ್ಮ ಜೀವನವನ್ನು ಸಾರ್ಥಕ್ಯವಾಗಿ ಬಳಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಜಗತ್ತಿನಲ್ಲಿ ಶಾಂತಿನೆಲೆಯೂರಬೇಕಾಗಿದೆ. ಸ್ವಾರ್ಥದ ಬದುಕು ಬದುಕಲ್ಲ. ನಿಸ್ವಾರ್ಥದ ಬದುಕು ನಿಜ ಬದುಕು. ನಮ್ಮ ಬದುಕು ಆದರ್ಶವಾಗಬೇಕು ಎಂದರು.
ವೇಸಮೂರ್ತಿ ಚಂದ್ರಶೇಖರ ಉಪಾಧ್ಯಯರವರ ಪೌರೋಹಿತ್ಯದಲ್ಲಿ ಶನೈಶ್ಚರ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here