ಕಲ್ಲಡ್ಕ:ಶ್ರೀರಾಮ ಶಾಲೆಯಲ್ಲಿ ವಿವಿಧ ಹಣ್ಣುಗಳ ಪರಿಚಯ ಹಾಗೂ ಪೌಷ್ಠಿಕಾಂಶಗಳ ಮಾಹಿತಿ ಕಾರ್ಯಕ್ರಮ

0

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವಿಧ ಹಣ್ಣುಗಳ ಪರಿಚಯ ಹಾಗೂ ಪೌಷ್ಠಿಕಾಂಶಗಳ ಮಾಹಿತಿ ಕಾರ್ಯಕ್ರಮ ಫೆ.1ರಂದು ನಡೆಯಿತು.


ಪರಿಚಿತವಾದ ಹಾಗೂ ಮನೆಯಲ್ಲಿ ಬೆಳೆಯುವಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಬೇಕಾದಂತಹ ಹೆಚ್ಚಿನ ಪ್ರೋಟೀನ್ ಮತ್ತು ವಿಟಮಿನ್‌ಗಳು ಸಿಗುತ್ತವೆ. ಮನೆಯಲ್ಲಿ ಹಣ್ಣಿನಗಿಡ-ಮರಗಳನ್ನು ಬೆಳೆಯಬೇಕು,ಊಟದ ನಂತರ ಹಣ್ಣುಗಳನ್ನು ಸೇವಿಸಬೇಕು,ಇದರಿಂದ ನಮ್ಮಆರೋಗ್ಯ ವೃದ್ಧಿಸುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಹೇಳಿದರು. 2ನೇ ತರಗತಿಯ ವಿದ್ಯಾರ್ಥಿಗಳಿಗೆ ಹಣ್ಣುಗಳಲ್ಲಿರುವ ಪೋಷಕಾಂಶಗಳ ಮಾಹಿತಿಯನ್ನು ತಿಳಿಸುತ್ತಾ,ವಿವಿಧ ಹಣ್ಣುಗಳ ಕುರಿತಾಗಿ ವಿವರಿಸುತ್ತಾ ಪರಿಚಯಿಸಿದರು.


ಕಾರ್ಯಕ್ರಮದಲ್ಲಿ ವಿವಿಧ ಹಣ್ಣುಗಳನ್ನು ಮಕ್ಕಳಿಗೆ ಸವಿಯಲು ನೀಡಲಾಯಿತು.ನಂತರ ಎಲ್ಲಾ ಹಣ್ಣುಗಳನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನಡೆಯಿತು. 2ನೇ ತರಗತಿಯ ಮಕ್ಕಳು ಮಾಡಿದ ವಿವಿಧ ಮನೆಯ ಮಾದರಿಗಳ ಪ್ರದರ್ಶನ ನಡೆಯಿತು.


ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್‍ಯಕಾರಿಣಿ ಸದಸ್ಯೆ ಡಾ|| ಕಮಲಾ ಪ್ರಭಾಕರ್ ಭಟ್ ಮತ್ತು ಮುಖ್ಯೋಪಾಧ್ಯಾಯ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು 2ನೇ ತರಗತಿಯ ವಿದ್ಯಾರ್ಥಿಯಾದ ಹಾರ್ಧಿಕ್ ಮೋಹನ್ ಸ್ವಾಗತಿಸಿ, ಅಧ್ಯಾಪಕ ರೂಪಕಲಾ ಎಂ ವಂದಿಸಿದರು.

LEAVE A REPLY

Please enter your comment!
Please enter your name here