ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ, ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಫೆ.೧ರಂದು ಬೆಳಗ್ಗೆ ಹೋಮ ಪಂಚಕಜ್ಜಾಯ ನಡೆಯಿತು. ಸಾಯಂಕಾಲ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಭಂಡಾರ ಇಳಿಯಿತು. ಸಾಯಂಕಾಲ ಅಣ್ಣಪ್ಪ ಪಂಜುರ್ಲಿ ಕೋಲ ನಡೆಯಿತು. ರಾತ್ರಿ ಕಲ್ಲುರ್ಟಿ ಪಂಜುರ್ಲಿ ಕೋಲ ನಡೆಯಿತು.
ಫೆ.2 ರಂದು ಸಾಯಂಕಾಲ ಬಾಕಿಲ ಗುತ್ತು ಧರ್ಮಚಾವಡಿಯಿಂದ ಬೈದೇರುಗಳ ಕಿರುವಾಳು ತೆಗೆದು ಬಳಿಕ ಬ್ರಹ್ಮರ ಬಲಿ ನಡೆಯಿತು. ಸಾಯಂಕಾಲ ಬೈದೇರುಗಳು ಗರಡಿ ಇಳಿದು ಮಾಯಂದಾಲ್ ಗರಡಿ ಇಳಿದು, ಬೈದೇರುಗಳು ಸುರಿಯ ಹಾಕುವ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ನಡೆಯಿತು.
ಫೆ.3ರಂದು ಗುಳಿಗ ಕೋಲ ನಡೆಯಿತು. ಬಾಕಿಲ ಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ಮಂಗಳೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು, ಜತೆ ಕಾರ್ಯದರ್ಶಿ ಸಂಕಪ್ಪ ಪೂಜಾರಿ ಮಾಡಾವು, ಟ್ರಸ್ಟಿಗಳಾದ ಜನಾರ್ದನ ಪೂಜಾರಿ ಬಾಕಿಲಗುತ್ತು, ಸುರೇಶ್ ಸಾಲ್ಯಾನ್ ಬಾಕಿಲಗುತ್ತು, ಶೈಲೇಶ್ ಕುಮಾರ್ ಅಗತ್ತಾಡಿ, ಚಂದ್ರಶೇಖರ ಗೋಳಿಕಟ್ಟೆ, ಪುಷ್ಪ ಬಾಕಿಲಗುತ್ತು, ಕೃಷ್ಣ ಶಾಂತಿ ಪಾಣೆರಮಜಲು, ವಾರಿಜ ವಸಂತ ಸುವರ್ಣ ಕೆಂಗುಡೆಲು, ಕುಟುಂಬಸ್ಥರು ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.