ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ಹರ್ ಘರ್ ಜಲ್ ಕಾರ್ಯಕ್ರಮ

0

ಬಂಟ್ವಾಳ : ದಕ್ಷಿಣ ಕನ್ನಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ಡಿಸೆಂಬರ್ 29 ಹರ್ ಘರ್ ಜಲ್ ಘೋಷಣೆ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮೋಹಿನಿ , ಉಪಾಧ್ಯಕ್ಷ ಸುನಿಲ್ ಕುಮಾರ್, ಪಂ. ಅ. ಅಧಿಕಾರಿಗಳು ˌ ಪಂಚಾಯತ್ ಸದಸ್ಯರುˌ ಪಂಪು ಚಾಲಕರುˌ ಪಂಚಾಯತ್ ಸಿಬ್ಬಂದಿಗಳುˌ , ಗ್ರಾಮಸ್ಥರು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಅಮ್ಟಾಡಿ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಣೆ ಮಾಡಲಾಯಿತು .

ಪಂಚಾಯತ್ ಅಧ್ಯಕ್ಷರು ಮಾತನಾಡಿ ಜಲಜೀವನ್ ಮಿಷನ್ ನ ಅನುಷ್ಠಾನ ಯಶಸ್ವಿಯಾಗಿದೆ . ಸರ್ಕಾರದ ಈ ಯೋಜನೆ ಗ್ರಾಮದ ಪ್ರತಿಯೋಬ್ಬರಿಗೂ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸಿ ಕೊಡುವಲ್ಲಿ ಸಫಲವಾಗಿದೆ ಆದುದರಿಂದ ಅಮ್ಟಾಡಿ ಮತ್ತು ಕೂರಿಯಾಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲು ಸಂತೋಷವಾಗುತ್ತದೆ ಎಂದರು.


ಜಲಜೀವನ್ ಮಿಷನ್ ನ ಯೋಜನಾ ವ್ಯವಸ್ಥಾಪಕ ಶ್ರೀ ವಿಘ್ನೇಶ್ ರಾಜ್ˌ ಅನುಷ್ಠಾನ ಬೆಂಬಲ ಸಂಸ್ಥೆಯ ಚರಣ್ ರಾಜ್ˌ ಇಂಜಿನಿಯರ್ ನಾಸೀರ್ ಹಾಗು ಅಶ್ವಿನ್ ಅನುಷ್ಠಾನ ಬೆಂಬಲ ಸಂಸ್ಠೆ – 2ನ ಸಿಬ್ಬಂದಿ ವಿಲ್ಮಾ ಉಪಸ್ಠಿತರಿದ್ದರು.

LEAVE A REPLY

Please enter your comment!
Please enter your name here