ಪುಂಜಾಲಕಟ್ಟೆ: ಈ ಬಾರಿಯ ಕಂಬಳ ಋತುವಿನ ಮೊದಲ ಕಂಬಳ ಕೂಟ ಬಂಟ್ವಾಳ ತಾಲುಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ಕಕ್ಯಪದವು ಮೈರ- ಬರ್ಕೆಜಾಲು ಎಂಬಲ್ಲಿ “ಸತ್ಯ- ಧರ್ಮ” ಜೋಡುಕರೆ ಬಯಲು ಕಂಬಳಕ್ಕೆ ನ.26ರಂದು ಬೆಳಗ್ಗೆ ಚಾಲನೆ ನೀಡಲಾಯಿತು.
ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.
ಉಳಿ ಶ್ರೀಗೋಪಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ “ಸತ್ಯ-ಧರ್ಮ” ಜೋಡುಕರೆಯನ್ನು ಉದ್ಘಾಟಿಸಿ ಮಾತನಾಡಿ, ಸನಾತನ ಸಂಸ್ಕೃತಿಗೆ ಕೆಲವರಿಂದ ಧಕ್ಕೆ ತರುವ ಕೆಲಸಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕಂಬಳ,ದೈವರಾಧನೆಯನ್ನು ಉಳಿಸುವ ಕಾರ್ಯ ನಡೆಯುತ್ತಿರುವುದು ಅಭಿನಂದನೀಯವಾಗಿದ್ದು ,ಸತ್ಯ- ಧರ್ಮಕ್ಕೆ ಯಾವತ್ತು ಜಯ ಸಿಗಲಿದೆ ಎಂದರು.
ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟದಡೆ ದಶಮಾನೋತ್ಸವದ ಕಂಬಳ ಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಯಾಗಿದ್ದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಕಂಬಳ ತುಳುನಾಡಿನ ಅದ್ಬುತ ಸಂಸ್ಕೃತಿಯಾಗಿದ್ದು,ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್,
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿತಾಪಂ ಉಪಾಧ್ಯಕ್ಷ ಆನಂದ ಎ.ಶಂಭೂರು,ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಛಾ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ,ಉಪಾಧ್ಯಕ್ಷ ಚಿದಾನಂದರೈ ಕಕ್ಯ, ಪ್ರಮುಖರಾದ ರಾಮಯ್ಯ ಭಂಡಾರಿ, ಉಳಿ ಸೇ.ಸ.ಸಂಘದ ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್, ಉಳಿ ದಾಮೋದರ ನಾಯಕ್, ಭರತ್ ಕುಮಾರ್ ಶೆಟ್ಟಿ ಸಿ.ಎ.ಬೆಂಗಳೂರು,ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಆದಂಕುಂಞ, ಗುರು ಪ್ರಸಾದ್,ರೂಪೇಶ್ ಆಚಾರ್ಯ, ಸರಪಾಡಿ ಗ್ರಾ.ಪಂ.ಸದಸ್ಯ ಧನಂಜಯ ಶೆಟ್ಟಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಬಂಟ್ವಾಳ ವ್ಯ. ಸೇ .ಸ .ಸಂಘದ ನಿರ್ದೇಶಕ ವಿಠಲ ಅಲ್ಲಿಪಾದೆ, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ,ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ತುಷಾರ್ ಭಂಡಾರಿ, ಲತೀಶ್ ಕುಕ್ಕಾಜೆ, ಉದ್ಯಮಿ ಜಸ್ಟಿನ್ ಥೋಮಸ್,
ಕಂಬಳ ಸಮಿತಿ ಪದಾಧಿಕಾರಿಗಳಾದ ಸಾಂತಪ್ಪ ಪೂಜಾರಿ ಹಟದಡ್ಕ,ಸುಧಾಕರ ಶೆಟ್ಟಿ,ಉಮೇಶ್ ಪೂಜಾರಿ,ಪುರಂದರ ,ಪುರುಷೋತ್ತಮ ಪೂಜಾರಿ ಪಲ್ಕೆ,ಧರ್ನಪ್ಪ ಪೂಜಾರಿ, ರಂಜಿತ್ ಮೈರಾ, ಗೋಪಾಲ ಶೆಟ್ಟಿ ,ಬಾಬುಗೌಡ ,ಅಬ್ದುಲ್ ರಹಿಮಾನ್ ಕಕ್ಕೆಪದವು, ದಿನೇಶ್ ದಲ್ಯಂತ್ತಬೈಲ್, ಗ್ರಾ.ಪಂ.ಸದಸ್ಯರಾದ ಸತೀಶ್ ಕಜೆಕಾರ್, ಗಿರೀಶ್ ,ವಸಂತ ಪೂಜಾರಿ,ವಸಂತ ಸಾಲಿಯಾನ್,ಸುರೇಶ್ ಪೂಜಾರಿ,ಚೇತನ್ ಊರ್ದೊಟ್ಟು,ಶಿವಪ್ಪ ಪೂಜಾರಿ, ರೋಹಿನಾಥ್ ಕಕ್ಯಪದವು,ವಸಂತಗೌಡ,ಪ್ರವೀಣ್ ಶೆಟ್ಟಿ ಕಿಂಜಾಲು, ಇಂಜಿನಿಯರ್ ಯಜ್ಞೇಶ್ ಉಳಿ,ಲಿಯೋ ಫೆರ್ನಾಡೀಸ್,ಸುರೇಶ್ ಶೆಟ್ಟಿ ಮಿಯಾರ್,ಮೋಹನ್ ಕೆ.ಶ್ರೀಯಾನ್,ನವೀನ್ ಶಾಂತಿ,ಮಾರಪ್ಪ ಭಂಡಾರಿ ಮೊದಲಾದವರಿದ್ದರು.
ಇದೇ ವೇಳೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟೇಶ್ ಬಂಟ್ವಾಳ ,ಜಯರಾಮ ಆಚಾರ್ಯ,ವೆಂಕಪ್ಪ ನಲಿಕೆ ಅವರನ್ನು ಅಭಿನಂದಿಸಲಾಯಿತು.
ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು. ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ನೇರಳಪಲ್ಕೆ ವಂದಿಸಿದರು.ಪ್ರಕಾಶ್ ಕಜೆಕಾರು ಕಾರ್ಯಕ್ರಮ ನಿರೂಪಿಸಿದರು