ಇನ್ಫೆಂಟ್ ಜೀಸಸ್ ಅ.ಹಿ.ಪ್ರಾ.ಶಾಲೆ, ಮೊಡಂಕಾಪು ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ವಿದ್ಯಾರ್ಥಿನಿಯರ ಸಾಧನೆ

0

ಬಂಟ್ವಾಳ : ಯಮಾತೋ ಶೋಟೋಕಾನ್ ಕರಾಟೆ ಅಸೋಶಿಯೆಶನ್ ಟ್ರ್ರಸ್ಟ್ ಮಂಗಳೂರು ಇವರು ಆಯೋಜಿಸಿದ ಬಂಟ್ವಾಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಥಮ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ ಇನ್ಫೆಂಟ್ ಜೀಸಸ್ ಅ.ಹಿ.ಪ್ರಾ.ಶಾಲೆ, ಮೊಡಂಕಾಪು ಇಲ್ಲಿನ 4 ವಿದ್ಯಾರ್ಥಿನಿಯರು ಭಾಗವಹಿಸಿ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನ 1,2 ಬೆಳ್ಳಿ 1 ಕಂಚಿನ ಪದಕ ಗಳಿಸಿರುತ್ತಾರೆ.

ಶಾಲಾ ಸಂಚಾಲಕರಾದ ಅತೀ ವಂ|ಫಾ ವಲೇರಿಯನ್ ಡಿಸೋಜರವರು, ಶಾಲಾ ಮುಖ್ಯೋಪಾಧ್ಯಾಯರಾದ ತೆರೆಜಾ ಡಿಸಿಲ್ವಾ, ಕರಾಟೆ ತರಬೇತುದಾರರಾದ ರೆನ್ಸಿ ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ ಇವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here