ನ.23:ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

0

ಬಂಟ್ವಾಳ : ಕಾವಳಮೂಡೂರು ಗ್ರಾಮದ ಕಾರಿಂಜದಲ್ಲಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ನ. 23ರಂದು ಲಕ್ಷದೀಪೋತ್ಸವವು ಜರಗಲಿದೆ.
ಕಾರ್ಯಕ್ರಮ ರಾತ್ರಿ ಗಂಟೆ 6 ಕ್ಕೆ ಈಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ ಪ್ರಾರಂಭ, ರಾತ್ರಿ ಘಂಟೆ ೮ಕ್ಕೆ ಈಶ್ವರ ಸನ್ನಿಧಿಯಲ್ಲಿ ರಂಗಪೂಜೆ, ರಾತ್ರಿ ಘಂಟೆ 8.30 ಕ್ಕೆ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಸನ್ನಿಧಿಗೆ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ರಾತ್ರಿ ಗಂಟೆ 10 ಕ್ಕೆ ಲಕ್ಷದೀಪೋತ್ಸವ ನಿಮಿತ್ತ ಶ್ರೀ ಕಾರಿಂಜೇಶ್ವರ ದೇವರು ಪಾರ್ವತಿ ಸನ್ನಿಧಿಗೆ ಆಗಮನ, ರಾತ್ರಿ 10.30 ಕ್ಕೆ ಕೊಡಮಣಿತ್ತಾಯ ದೈವದ ನೇಮ, ರಾತ್ರಿ 11 ಕ್ಕೆ ಶ್ರೀ ಪಾರ್ವತಿ ಪರಮೇಶ್ವರ ದೇವರ ಉತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸುದ್ದಿ ಯ್ಯೂಟೂಬ್‌ ಚಾನಲ್‌ನಲ್ಲಿ ನೇರ ಪ್ರಸಾರ ನಡೆಯಲಿದೆ.

LEAVE A REPLY

Please enter your comment!
Please enter your name here