ಸರಪಾಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮ

0

ಬಂಟ್ವಾಳ : ಸರಪಾಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಶ್ರೀ ರಾಮ ಭಜನಾ ಮಂದಿರ ಅಲ್ಲಿಪಾದೆಯಲ್ಲಿ ಸರಪಾಡಿ, ನಾವೂರು, ಉಳಿ, ಕಾವಳಪಡೂರು, ಕಾವಳಮೂಡೂರು, ಮಣಿನಾಲ್ಕೂರು, ಬಡಗಕಜೆಕಾರು, ಗ್ರಾಮ ಪಂಚಾಯತ್‌ಗಳ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.


ತಹಶೀಲ್ದಾರ್ ಡಾ| ಸ್ಮಿತಾರಾಮ ಮಾತನಾಡಿ ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಜನಸ್ಪಂದನ ಕಾರ್ಯಕ್ರಮ ಅಯೋಜಿಸಿದ್ದು ಜನ ಸಾಮಾನ್ಯರ ಕುಂದು ಕೊರತೆ ಆಲಿಸಿ ಪರಿಹಾರ ಕಲ್ಪಿಸಲಾಗಿದೆ. ಆದರೆ ಕೊರೊನಾ ಸಮಯದಲ್ಲಿ ಕರ್ನಾಟಕ ಕೆ.ಎಸ್.ಆರ್.ಟಿ.ಸಿ ಸಹಯೋಗದೊಂದಿಗೆ ಆರೋಗ್ಯ ಸಂಚಾರಿ ಬಸ್ಸಿನ ವ್ಯವಸ್ಥೆಯನ್ನು ಮಾಡಿ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯದ ಪರಿಕಲ್ಪನೆಯನ್ನು ಮಾಡಲಾಗಿದೆ.
ಅದು ಅಲ್ಲದೆ ಬಂಟ್ವಾಳ ತಾಲೂಕಿಗೆ ಸಂಚಾರಿ ಪಶು ವೈದ್ಯಕೀಯ ವಾಹನವನ್ನು ಒದಗಿಸಿ ಗ್ರಾಮೀಣ ಸಂಚಾರಿ ಪಶು ಸಂಗೋಪನೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಲ್ಲಿಪಾದೆಯಲ್ಲಿ ಚರ್ಚ್ ಬಳಿ ಚರ್ಚ್ ಆಡಳಿತ ಮಂಡಳಿ ಹಾಗೂ ಆಟೊ ಚಾಲಕರ ಮಧ್ಯೆ ಜಾಗವೊಂದಕ್ಕೆ ಸಂಬಂಧಿಸಿ ಉಂಟಾಗುವ ವಿವಾದದ ಅಹವಾಲನ್ನು ಚರ್ಚ್‌ನ ಧರ್ಮಗುರುಗಳು ಶಾಸಕರಿಗೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಶಾಸಕರು ವಿವಾದಿತ ಜಮೀನಿನ ಸರ್ವೆ ನಡೆಸಿ ಸಂಬಂಧಪಟ್ಟ ಜಾಗ ಯಾರಿಗೆ ಸೇರಿದೆ ಎಂಬುದನ್ನು ಖಚಿತ ಪಡಿಸಿ ನಿರ್ಧಾರ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಇದೇ ಜಾಗಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ರಿಕ್ಷಾ ಚಾಲಕರು ಈ ಜಾಗದಲ್ಲಿ ರಿಕ್ಷಾ ತಂಗುದಾಣಕ್ಕೆ ಹಲವು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಚರ್ಚ್ ಆಡಳಿತ ಮಂಡಳಿಯವರು ರಾತ್ರೋರಾತ್ರಿ ಅದೇ ಜಾಗದಲ್ಲಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಈ ಮೂರ್ತಿಯನ್ನು ಕೂಡಲೇ ತೆರವುಗೊಳಿಸಿ ರಿಕ್ಷಾ ತಂಗುದಾಣ ನಿರ್ಮಾಣ ಮಾಡಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಕಾರವಾಗಿ ಪ್ರತಿಕ್ರಿಯಿಸಿದ ಶಾಸಕರು ನಾನು ಎರಡು ಸಮುದಾಯದವರಿಗೂ ಕೋಮು ಗಲಭೆ ಮಾಡಲು ಎಂದಿಗೂ ಬಿಡುವುದಿಲ್ಲಾ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ ಸರಪಾಡಿಯಲ್ಲಿ ಸಬ್‌ಸ್ಟೇಷನ ನಿರ್ಮಿಸುವಂತೆ 10 ವರ್ಷಗಳಿಂದ ಮೆಸ್ಕಾಂಗೆ ಮನವಿ ಸಲ್ಲಿಸಿದರು ಕೂಡ ಪ್ರಯೋಜನ ಆಗಲಿಲ್ಲ ಎಂದು ಸರಪಾಡಿ ಗ್ರಾಮ ಪಂಚಾಯತ್ ಸದಸ್ಯ ಧನಂಜಯ ಶೆಟ್ಟಿ ಗಂಭೀರ ಆರೋಪ ಮಾಡಿದರು. ನಾವೂರು ಅಭಿವೃದ್ದಿ ಅಧಿಕಾರಿ ವಿರುದ್ದ ಗ್ರಾ.ಪಂ. ಸದಸ್ಯರು ದೂರು ಸಲ್ಲಿಸಿದರು. ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಪಶುಸಂಗೊವಪನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ವತಿಯಿಂದ ಸುಮಾರು 417 ಮಂದಿಗೆ ಸವಲತ್ತು ವಿತರಿಸಲಾಯಿತು.

69 ಅರ್ಜಿಗಳನ್ನು ಸ್ವೀಕರಿಸಿ ಕೂಡಲೇ ವಿಲೇವಾರಿ ಮಾಡುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಸರಪಾಡಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದರು. ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರಾ, ಮಣಿನಾಲ್ಕೂರು ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಕಾವಳ ಮೂಡೂರು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ, ಶಿಕ್ಷಣಾಧಿಕಾರಿ ಜ್ಞಾನೇಶ್, ಜಿ.ಪಂ. ಎ.ಇ.ಇ ತಾರನಾಥ, ಪಿ.ಡಬ್ಲೂಡಿ ಎ.ಇ. ಜಯಪ್ರಕಾಶ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಮೆಸ್ಕಾಂ ಅಭ್ಯಂತ ನಾರಾಯಣ ಭಟ್, ಹಿಂದೂಳಿದ ವರ್ಗ ಕಲ್ಯಾಣಾಧಿಕಾರಿ ಬಿಂದಿಯಾ, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಡಿಪೋ ಮ್ಯಾನೇಜರ್ ಶ್ರೀಶ ಭಟ್, ತೋಟಗಾರಿಕಾ ಇಲಾಖೆಯ ಸಹಾಯ ನಿರ್ದೇಶಕರು ಪ್ರದೀಪ್ ಡಿಸೋಜಾ, ಬಂಟ್ವಾಳ ಗ್ರಾಮಂತರ ಠಾಣಾ ಎಸ್.ಐ ಯವರಾದ ಹರೀಶ್, ಭಾರತಿ, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಅವಿನಾಶ್, ಕಾರ್ಮಿಕ ಅಧಿಕಾರಿ ಮಾರ್ಲಿನ್ ಗ್ರೇಸಿ ಲೋಬೋ, ಎ.ಸಿ.ಡಿ.ಪಿ.ಒ ಶೀಲಾವತಿ, ಸರಪಾಡಿ ಗ್ರಾ.ಪಂ. ಪಿ.ಡಿ.ಓ ಸೇಲ್ವಿಯಾ ಫೆರ್ನಾಂಡಿಸ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ತಾ.ಪಂ. ಇ.ಒ ರಾಜಣ್ಣ ಸ್ವಾಗತಿಸಿದರು, ಸರಪಾಡಿ ಗ್ರಾ.ಪಂ. ಸದಸ್ಯ ಧನಂಜಯ ಶೆಟ್ಟಿ ವಂದಿಸಿದರು. ಕಾರ್ಯಕ್ರವನ್ನು ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.

LEAVE A REPLY

Please enter your comment!
Please enter your name here