ವಿಟ್ಲ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ದ.ಕ. ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸೆ. 19ರಂದು ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲಾ ತಂಡ ಅಭಿನಯಿಸಿದ “ಲಸಿಕಾಮೃತ” ವಿಜ್ಞಾನ ನಾಟಕ ದ್ವಿತೀಯ ಸ್ಥಾನ ಪಡೆದಿದೆ.
ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆಯವರ ಪರಿಕಲ್ಪನೆಯ, ಪತ್ರಕರ್ತ,ರಂಗಕರ್ಮಿ ಮೌನೇಶ್ ವಿಶ್ವಕರ್ಮ ನಿರ್ದೇಶನದ ಈ ನಾಟಕದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಸ್ವಸ್ತಿ, ಅನಿಷಾ ಆರ್, ಸುಜನ ಡಿ ಕಾಮತ್, ಸಿಂಚನ ಶ್ರೀ, ಶಾಶ್ವತ್ ರಾವ್ , ಆಶ್ರಯ, ಸಂಜಿತ್ ಹಾಗೂ ಬಿಂದಿಯಾ ಭಾಗವಹಿಸಿದ್ದರು.ಶಿಕ್ಷಕರಾದ ಸುಧಾ ಎನ್ ರಾವ್,ಜಯಶ್ರೀ ಆಚಾರ್ಯ ಮಾರ್ಗದರ್ಶನ ನೀಡಿದ್ದರು. ವಿಜೇತರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಶಿಕ್ಷಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.