ಪುದು: ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ

0

ಪರಿಶಿಷ್ಟ ಜಾತಿ-ಪಂಗಡ ಅನುದಾನ ದುರ್ಬಳಕೆ ಆರೋಪ

ಬಂಟ್ವಾಳ: ಇಲ್ಲಿನ ಪುದು ಗ್ರಾಮ ಪಂಚಾಯಿತಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿಗೆ ಬಂದಿರುವ ಸರಕಾರದ ಅನುದಾನ ದುರ್ಬಳಕೆಯಾಗಿದೆ ಎಂದು  ಬಿಜೆಪಿ ಜಿಲ್ಲಾ ಘಟಕ ಕಾರ್ಯದರಶಿ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಇಲ್ಲಿನ ಪುದು ಗ್ರಾಮ ಪಂಚಾಯಿತಿ ಎದುರು ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಮೋರ್ಚಾ ವತಿಯಿಂದ ಸೆ.19ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮಂಗಳೂರು ಮಂಡಲ ಉಪಾಧ್ಯಕ್ಷ ವಿಠಲ್ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ವಿನಯನೇತ್ರ ಮಾತನಾಡಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಕೋಶಾಧಿಕಾರಿ ಪ್ರಕಾಶ್ ಸಿಂಪೋನಿ, ಮೇರಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಕಕರ್ೇರ, ಪ್ರಮುಖರಾದ  ಹೇಮಂತ್ ಶೆಟ್ಟಿ, ಮನೋಜ್ ಆಚಾರ್ಯ ನಾಣ್ಯ, ಪ್ರವೀಣ್ ಶೆಟ್ಟಿ ಸುಜೀರು, ದಿನೇಶ್ ಶೆಟ್ಟಿ ಕೊಟ್ಟಿಂಜ, ಸತೀಶ್ ನಾಯ್ಕ, ಮನೋಜ್ ಕುಮಾರ್, ಸಂದೇಶ್, ವರುಣ್ ರಾಜ್, ಆನಂದ ಪಾಂಗಾಳ್, ರಮೇಶ್ ಕುದ್ರೆಬೆಟ್ಟು, ಜಯಚಂದ್ರ, ಸುಬ್ರಹ್ಮಣ್ಯ ರಾವ್, ಪದ್ಮನಾಭ ಶೆಟ್ಟಿ ಪುಂಚಮೆ, ಸಂತೋಷ್ ನೆತ್ತರಕೆರೆ, ಆಶಾ ನಯನ, ಜಯಂತಿ, ಸರೋಜಿನಿ, ಭಾಸ್ಕರ ಚೌಟ ಕುಮುಡೇಲು, ಸೋಮಪ್ಪ ಕೋಟ್ಯಾನ್, ವೆಂಕಪ್ಪ ಗುರಿಕಾರ, ಗಿರಿಯಪ್ಪ ಕುಂಭ್ಡೇಲು, ಸೋಮನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here