ಕ್ಷೇತ್ರದ ಜನತೆ ಋಣ ಎಂದಿಗೂ ಮರೆತಿಲ್ಲ: ಮಾಜಿ ಸಚಿವ ರೈ ಹೇಳಿಕೆ
ಬಂಟ್ವಾಳ: ಕಳೆದ 35 ವರ್ಷಗಳಿಂದ ಬಂಟ್ವಾಳ ಕ್ಷೇತ್ರದ ಜನತೆ ನನಗೆ ನೀಡಿರುವ ಪ್ರೀತಿ ಮತ್ತು ರಾಜಕೀಯ ಮನ್ನಣೆಗೆ ಎಂದಿಗೂ ಚ್ಯುತಿ ಬಾರದಂತೆ ನಡೆದಿದ್ದೇನೆ. ಇಲ್ಲಿನ ಕ್ಷೇತ್ರದ ಜನರ ಋಣ ತೀರಿಸಲು ಎಂದಿಗೂ ನನಗೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಿತ ಯುವ ಕಾಂಗ್ರೆಸ್ ಸಮಿತಿ ಮತ್ತು ಅಲ್ಪಸಂಖ್ಯಾತ ಘಟಕದ ವತಿಯಿಂದ ಇಲ್ಲಿನ ಬೈಪಾಸ್ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ರೈ ಅವರ ಹುಟ್ಟುಹಬ್ಬ ಪ್ರಯುಕ್ತ ಸೆ.19ರಂದು ನಡೆದ ಬೃಹತ್ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಿತ್ತಬೈಲು ಮಸೀದಿ ಇರ್ಷಾದ್ ಹುಸೇನ್ ದಾರಿಮಿ, ಕಾವಳಕಟ್ಟೆ ಕೊಡಮಣಿತ್ತಾಯ ದೈವಸ್ಥಾನದ ತಂತ್ರಿ ಗಣಪತಿ ಮುಚ್ಚಿನ್ನಾಯ, ಅಲ್ಲಿಪಾದೆ ಚರ್ಚ್ ಧರ್ಮಗುರು ಫೆಡ್ರಿಕ್ ಮೊಂತೆರೋ ಆಶೀರ್ವಚನ ನೀಡಿದರು.
ಇದೇ ವೇಳೆ ಕಣ್ಣು ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆ ಹಾಗೂ ಬಿ.ರಮಾನಾಥ ರೈ ಅವರನ್ನು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರೊಡ್ರಿಗಸ್, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವಿನಾ ವಿಲ್ಮಾ ಮೊರಾಸ್, ಜಯಂತಿ ಪೂಜಾರಿ, ಕೆಪಿಸಿಸಿ ಸಂಯೋಜಕ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಶರೀಫ್, ಕಿಸಾನ್ ಘಟಕ ಜಿಲ್ಲಾಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಪ್ರಮುಖರಾದ ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಕೆ.ಪದ್ಮನಾಭ ರೈ, ಕೆ.ಮಾಯಿಲಪ್ಪ ಸಾಲ್ಯಾನ್, ಕೆ.ರಮೇಶ್ ನಾಯಕ್, ಸದಾನಂದ ಶೆಟ್ಟಿ ದಬರ್, ಮನೋಹರ್ ನೇರಂಬೋಳು, ಸುಧಾಕರ ಶೆಣೈ ಖಂಡಿಗ, ಪಿ.ಎ.ರಹೀಂ, ವಿನಯ್, ಸಂಪತ್ ಕುಮಾರ್ ಶೆಟ್ಟಿ, ಕಾಂಚಲಾಕ್ಷಿ ಎಚ್.ಕೆ.ನೈನಾಡು ಮತ್ತಿತರರು ಇದ್ದರು.