ಬಂಟ್ವಾಳ: ಎಸ್ .ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಜಿಲ್ಲಾವ್ಯಾಪಿ ನಡೆಯುವ ಹಕ್ಕೊತ್ತಾಯ ಚಳುವಳಿಯ ಹತ್ತನೇ ದಿನವಾದ ಇಂದು ಕೊಡಾಜೆ ಸುಲ್ತಾನ್ ಬೀಡಿ ಸಂಸ್ಥೆಯೆದುರು ಹೈ ಕೋರ್ಟು ತೀರ್ಪಿನಂತೆ ತುಟ್ಟಿಬತ್ತೆ ರೂ.12.75 ಹಾಗೂ ರೂ.210 ಕನಿಷ್ಠ ಕೂಲಿ ಜ್ಯಾರಿಗೊಳಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಕಂಪೆನಿಯ ಮಾಲಕರಿಗೆ ಮನವಿ ಅರ್ಪಿಸಿದರು.
ಆಗಸ್ಟ್ 1 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮಿನಿವಿಧಾನ ಸೌಧದ ಎದುರು ಬೀಡಿ ಮಾಲಕರು ಹೈ ಕೋರ್ಟು ತೀರ್ಪು ಜ್ಯಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಲಿದ್ದು ನಂತರ ದ.ಕ ಜಿಲ್ಲಾಧಿಕಾರಿ ಮುಖೇನ ಮಾನ್ಯ ಕಾರ್ಮಿಕ ಮಂತ್ರಿಗೆ ಮನವಿ ಅರ್ಪಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೀಡಿ ಕಾಮಿಕರು ಮತ್ತು ಅವರ ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಡಿಕೆ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಲಾಯ್ತು.
ಚಳವಳಿಯಲ್ಲಿ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಅಧ್ಯಕ್ಷೆ ಉಮಾವತಿ ಕುರ್ನಾಡು, ಉಪಾಧ್ಯಕ್ಷೆ ಸೀತಾ ಅನಂತಾಡಿ, ಸಹಕಾರ್ಯದರ್ಶಿ ಮಮತಾ, ಮೋಹಿನಿ, ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ನ ಅಧ್ಯಕ್ಷ ಬಿ.ಬಾಬು ಭಂಡಾರಿ ಸಹಕಾರ್ಯದರ್ಶಿ ಹರ್ಷಿತ್, ಕೇಶವತಿ, ಎಂ.ಬಿ.ಭಾಸ್ಕ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮುಂದಾಳು ಗಿರಿಯಪ್ಪ ಪೂಜಾರಿ ಮುಜಲ, ಸುಂದರ ಮೂಲ್ಯ ಚಳವಳಿಯ ನೇತೃತ್ವ ವಹಿಸಿದ್ದರು.
ಪ್ರಾರಂಭದಲ್ಲಿ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್( ಎಐಟಿಯುಸಿ) ಸಹ ಕಾರ್ಯದರ್ಶಿ ಶಮಿತಾ ಸ್ವಾಗತಿಸಿ ಕೊನೆಯಲ್ಲಿ ಮಮತಾ ವಂದಿಸಿದರು.