ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಂಪ್ಯೂಟರ್ ಶಿಕ್ಷಕರ ಕಾರ್‍ಯಾಗಾರ

0

ಬಂಟ್ವಾಳ:ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕಇದರ ಆಶ್ರಯದಲ್ಲಿ ಪ್ರೌಢಶಾಲಾ ‘ಕಣಾದ’ ಕಂಪ್ಯೂಟರ್ ಲ್ಯಾಬ್‌ನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಕನ್ನಡ ಮಾಧ್ಯಮ ಶಾಲೆಯ ಕಂಪ್ಯೂಟರ್ ಶಿಕ್ಷಕರಿಗೆ 2 ದಿನಗಳ ಕಾರ್‍ಯಾಗಾರ ನಡೆಸಲಾಯಿತು.


ಕಾರ್‍ಯಾಗಾರವನ್ನು ಕರ್ನಾಟಕ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಲಹೆಗಾರ, ಮೊದಲ ಬಾರಿಗೆ ಕನ್ನಡದಲ್ಲಿ ವೆಬ್‌ಸೈಟ್ ರಚಿಸಿದ ಡಾ ಯು.ಬಿ. ಪವನಜ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಮತ್ತು Scratch ತಂತ್ರಾಂಶವನ್ನು ಕನ್ನಡದಲ್ಲಿ ಕೋಡಿಂಗ್‌ನ ಮೂಲಕ ಬಳಸುವುದು ಹೇಗೆ ಎಂಬುದರ ಬಗ್ಗೆ ತಿಳಿಸಿದರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿ 20ಕ್ಕಿಂತ ಹೆಚ್ಚು ತಾಂತ್ರಿಕ ಪ್ರಕಟಣೆಗಳಿರುವ ಹಾಗೂ ಅನುಮತಿ ಪಡೆದುಕೊಂಡ 30 ಪೇಟೆಂಟ್‌ಗಳು ಇರುವ ಡಾ|ಆನಂದ ಸಾವಂತ್‌ ಶಿಕ್ಷಕರಿಗೆ Scratch ತಂತ್ರಾಂಶದಲ್ಲಿ ಕೋಡಿಂಗ್ ಬಳಸುವುದರ ಬಗ್ಗೆ ಮಾಹಿತಿ ನೀಡಿದರು.


ಈ ಕಾರ್‍ಯಗಾರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಪರಿವೀಕ್ಷಕರಾದ ರಘುರಾಜ್‌ ಉಬರಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಎಂ.ಉಪಸ್ಥಿತರಿದ್ದರು.
ಎರಡನೇ ದಿನದಂದು ಕಾರ್‍ಯಗಾರದಲ್ಲಿ ಭಾಗವಹಿಸಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.ಒಟ್ಟು 19 ಸಂಸ್ಥೆಗಳಿಂದ 22 ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಕರಾದ ಕುಶಾಲಪ್ಪ ಅಮ್ಟೂರು ಕಾರ್‍ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು

LEAVE A REPLY

Please enter your comment!
Please enter your name here