ಸುಭಾಶ್ಚಂದ್ರ ಬೋಸ್ ಮರೆತ ಬಿಜೆಪಿ: ಮಾಜಿ ಸಚಿವ ರೈ
ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ದಾಸ ಮೈದಾನದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಆ.31ರಂದು ಚಾಲನೆ ನೀಡಿದರು. ಸ್ವಾತಂತ್ರ್ಯ ಪೂರ್ವ ದೇಶದಲ್ಲಿ ಬ್ರಿಟೀಷರ ವಿರುದ್ಧ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಆರಂಭಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರನ್ನು ಮರೆತ ಬಿಜೆಪಿ ಎಲ್ಲೆಡೆ ಸಾವರ್ಕರ್ ಆರಾಧನೆಗೆ ಮುಂದಾಗಿದ್ದಾರೆ ಎಂದು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಸ್ಥಳದಾನಿ ಡಾ.ಶಿವಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಚಂದ್ರಪ್ರಕಾಶ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಸೀತಾರಾಮ ಶೆಟ್ಟಿ, ಕೆ.ಮಾಯಿಲಪ್ಪ ಸಾಲ್ಯಾನ್, ಎಂ.ರಾಜೀವ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಎನ್.ಮಹಾಬಲ ಬಂಗೇರ, ಕೆ.ಜಗನ್ನಾಥ, ವಾಸು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ರಾಜೀವ ಕಕ್ಯಪದವು, ಪ್ರವೀಣ ಕಿಣಿ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ, ನಾರಾಯಣ ನೇರಂಬೋಳು, ಸೋಮಪ್ಪ ಪೂಜಾರಿ, ಭಕ್ತ ಕುಮಾರ್ ಶೆಟ್ಟಿ, ಮೋಹನ ಗೌಡ ಕಲ್ಮಂಜ, ಸುರೇಶ ಪೂಜಾರಿ, ಬಾಲಕೃಷ್ಣ ಅಂಚನ್, ಗಂಗಾಧರ ಪೂಜಾರಿ, ಮಧುಸೂಧನ ಶೆಣೈ, ಕಾಂಚಲಾಕ್ಷಿ ಮತ್ತಿತರರು ಇದ್ದರು.