ಜಕ್ರಿಬೆಟ್ಟು: 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಆ. 31 ರಿಂದ ಸೆ.4 ರತನಕ ನಿರಂತರ ಭಜನೆ, ಅನ್ನದಾನ : ಮಾಜಿ ಸಚಿವ ರೈ


ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಕಳೆದ ೧೮ ವರ್ಷಗಳ ಹಿಂದೆ ಆರಂಭಗೊಂಡು ಈ ಬಾರಿ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31 ರಿಂದ ಸೆ.4 ರತನಕ ನಿರಂತರ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಲಿದೆ ಆಚರಣಾ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ(ಆ.28) ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲಾ ಜಾತಿ ಮತ್ತು ಧರ್ಮಗಳ ಭಕ್ತರ ಒಗ್ಗೂಡುವಿಕೆಯಲ್ಲಿ ಸಾಮರಸ್ಯಕ್ಕಾಗಿ ‘ಬಂಟ್ವಾಳದ ಹಬ್ಬ’ವಾಗಿ ಮೂಡಿ ಬರಲಿದೆ ಎಂದರು.

ಬಂಟ್ವಾಳದ ನಾಡಹಬ್ಬವಾಗಿ ಐದು ದಿನಗಳಲ್ಲಿ ನಡೆಯುವ ಈ ವಿನೂತನ ಉತ್ಸವಕ್ಕೆ ವಿವಿಧ ಗ್ರಾಮಗಳಿಂದ ಭಕ್ತರು ಹಸಿರು ಹೊರೆಕಾಣಿಕೆ ಸಮರ್ಪಿಸಲಿದ್ದು, ಪ್ರತಿದಿನ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನೆ ಸಂಕೀರ್ತಣೆ, ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಮೊಡಂಕಾಪು ಚರ್ಚಿನ ಧರ್ಮಗುರು ವಲೇರಿಯನ್ ಡಿಸೋಜ ಆಶೀರ್ವಚನ ನೀಡುವರು. ಪ್ರಸಿದ್ಧ ಕಲಾವಿದರಿಂದ ನೃತ್ಯ ವೈಭವ, ಸಂಗೀತ ರಸಮಂಜರಿ, ತುಳು ನಾಟಕ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಎಂ.ರಾಜೀವ ಶೆಟ್ಟಿ ಎಡ್ತೂರು, ಎನ್.ಮಹಾಬಲ ಬಂಗೇರ, ಜನಾರ್ದನ ಚೆಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ, ಸುಧಾಕರ ಶೆಣೈ ಖಂಡಿಗ, ರಾಜೀವ ಕಕ್ಯಪದವು, ಉಮೇಶ ಕುಲಾಲ್ ನಾವೂರ, ಕೆ.ಪದ್ಮನಾಭ ರೈ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಪ್ರವೀಣ ಜಕ್ರಿಬೆಟ್ಟು, ಲೋಲಾಕ್ಷ ಶೆಟ್ಟಿ, ವೆಂಕಪ್ಪ ಪೂಜಾರಿ, ಸುರೇಶ ಪೂಜಾರಿ ಮತ್ತಿತರರು ಇದ್ದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಎಂ.ರಾಜೀವ ಶೆಟ್ಟಿ ಎಡ್ತೂರು, ಎನ್.ಮಹಾಬಲ ಬಂಗೇರ, ಜನಾರ್ದನ ಚೆಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ, ಸುಧಾಕರ ಶೆಣೈ ಖಂಡಿಗ, ರಾಜೀವ ಕಕ್ಯಪದವು, ಉಮೇಶ ಕುಲಾಲ್ ನಾವೂರ, ಕೆ.ಪದ್ಮನಾಭ ರೈ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಪ್ರವೀಣ ಜಕ್ರಿಬೆಟ್ಟು, ಲೋಲಾಕ್ಷ ಶೆಟ್ಟಿ, ವೆಂಕಪ್ಪ ಪೂಜಾರಿ, ಸುರೇಶ ಪೂಜಾರಿ ಮತ್ತಿತರರು ಇದ್ದರು.

೨೮ಬಿಟಿಎಲ್-ಉರುಡಾಯಿ
ಬಂಟ್ವಾಳ ತಾಲ್ಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭಾನುವಾರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಇದ್ದಾರೆ.
ಉರುಡಾಯಿ: ಶ್ರೀ ಮುಖ್ಯಪ್ರಾಣ ದೇವಸ್ಥಾನ
ಜೀರ್ಣೋದ್ಧಾರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ
ಬಂಟ್ವಾಳ:
ದೇವರ ಪ್ರೇರಣೆಯಂತೆ ಭಕ್ತರ ನಿಷ್ಕಲ್ಮಶ ಭಕ್ತಿ ಮತ್ತು ಶ್ರಮದಾನ ಸಹಿತ ಸಮರ್ಪಣಾ ಮನೋಭಾವದ ಕೊಡುಗೆಯಿಂದ ಗ್ರಾಮೀಣ ಪ್ರದೇಶಗಳ ದೇವಸ್ಥಾನ ಮತ್ತಿತರ ಶ್ರದ್ಧಾ ಕೇಂದ್ರಗಳ ಪುನರ್ ನಿಮಾಣ ಸಾಧ್ಯವಾಗುತ್ತದೆ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ಇಲ್ಲಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಭಾನುವಾರ ನಡೆದ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ವಿಜ್ಞಾಪನಾ ಪತ್ರದ ಬಿಡುಗಡೆಗೊಳಿಸಿ ಮಾತನಾಡಿ, ‘ಭೂ ಮಸೂದೆ ಕಾಯ್ದೆ ಜಾರಿ ಬಳಿಕ ಜಿಲ್ಲೆಯ ದುರ್ಬಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ದೊರೆತು ಬಹುತೇಕ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ನಡೆಸಲು ಸಾಧ್ಯವಾಗಿದೆ’ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here