ನಾವೂರು ಕೂಡಿಬೈಲು ಕಿರುಸೇತುವೆಗೆ ಹಾನಿ

0

ಬಂಟ್ವಾಳ : ನಾವೂರು ಗ್ರಾಮದ ಕೂಡಿಬೈಲು – ಆಲಂಪೊರಿ ರಸ್ತೆಯ ಕಿರುಸೇತುವೆಗೆ ಹಾನಿಯಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ಸುಮಾರು 50 ವರ್ಷ ಹಳೆಯದಾದ ಈ ಸೇತುವೆಯನ್ನು ಕಪ್ಪು ಕಲ್ಲು ಬಳಸಿ ಹಳೆಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ಹಾನಿಯಿಂದಾಗಿ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ.

ಸ್ಥಳೀಯ ನಾಗರಿಕರು ಕೃಷಿ ಚಟುವಟಿಕೆಗೆ ಹಾಗೂ ಇನ್ನಿತರ ಗ್ರಹೋಪಯೋಗಿ ವಸ್ತುಗಳನ್ನು ಈ ರಸ್ತೆಯ ಮೂಲಕವೇ ಸಾಗಿಸಬೇಕಾದ ಅನಿವಾರ್ಯತೆ ಇರುವುದರಿಂದ ಭಾಗಶಃ ಸೇತುವೆಯು ಮುರಿದು ಬಿದ್ದಿರುವುದರಿಂದ ಈ ಭಾಗದ ರೈತರಿಗೆ ತುಂಬಾ ತೊಂದರೆಯಾಗಿದೆ. ಕಳೆದ 5 ವರ್ಷಗಳ ಹಿಂದೆ ಈ ರಸ್ತೆಯನ್ನು ಡಾಮಾರಿಕರಣ ಮಾಡಿ ಅಭಿವೃದ್ದಿಗೊಳಿಸಿದರು ಕೂಡ ಸೇತುವೆಯ ಕಾಮಗಾರಿಯನ್ನು ಮಾಡದ ಕಾರಣ ಈ ಭಾಗದ ರಸ್ತೆಯಿಂದ ಕೆಂಪುಕಲ್ಲು ಹಾಗೂ ಜಲ್ಲಿ ಕಲ್ಲುಗಳ ಲಾರಿಗಳು ಅಧಿಕ ಸಂಖ್ಯೆಯಲ್ಲಿ ಸಂಚಾರಿಸುವುದರಿಂದ ಸೇತುವೆ ಹಾಗೂ ಸ್ಥಳೀಯ 2 ಮೋರಿಗಳು ಕುಸಿದು ಬಿದ್ದಿದೆ. ಸೇತುವೆ ಹಾನಿಯಾಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಕುರಿತು ಗಮನಹರಿಸಿ ಶೀಘ್ರದಲ್ಲಿ ಸೇತುವೆ ದುರಸ್ತಿ ಪಡಿಸಿ ಸಂಚಾರಕ್ಕೆ ಮುಕ್ತ ಗೊಳಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಪ್ರದೇಶಕ್ಕೆ ನಾವೂರು ಗ್ರಾ.ಪಂ. ಅಕ್ಷ ಬಿ. ಉಮೇಶ್ ಕುಲಾಲ್ ಅವರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲವಿನಾ ವಿಲ್ಮಾ ಮೊರಾಸ್, ಸದಸ್ಯರಾದ ಸುವರ್ಣ ಕುಮಾರ್ ಜೈನ್, ಯೋಗೀಶ್, ಫಾರೂಕ್, ಸ್ಥಳೀಯರಾದ ಮೌರಿಸ್ ಪಾಯಿಸ್, ಗಿಲ್ಬರ್ಟ್ ಪಾಯಿಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here