ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ. ಮೆಲ್ಕಾರ್ ಪಾಣೆಮಂಗಳೂರು ಇದರ 6 ನೇ ಶಾಖೆ ವಿಟ್ಲದ ರಸ್ಕಿನ್ಹಾ ಕಾಂಪ್ಲೆಕ್ಸ್ನಲ್ಲಿ ಫೆ. 5 ರಂದು ಬೆಳಗ್ಗೆ 11ಗಂಟೆಗೆ ಉದ್ಘಾಟನೆ ಆಗಲಿದೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ವಹಿಸುವರು. ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಕಾರಿಯ ಕಛೇರಿಯನ್ನು ಉದ್ಘಾಟಿಸುವರು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಬಂಗಾರು ಅರಸು ಭದ್ರತಾ ಕೋಶವನ್ನು ಉದ್ಘಾಟಿಸುವರು.
ಕನ್ಯಾನ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಗುರು ಫಾ| ಸುನಿಲ್ ಪ್ರವೀಣ್ ಪಿಂಟೋ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ವಿಟ್ಲ ಕಡಂಬು ಸಾಯಿಗಣೇಶ್ ಇಂಡೇನ್ ಗ್ಯಾಸ್ ಸರ್ವಿಸಸ್ನ ಬಿ. ಸತೀಶ್ ಕುಮಾರ್ ಆಳ್ವ, ವಿಟ್ಲ ಶ್ರೀನಿವಾಸ ಟ್ರೇಡರ್ಸ್ನ ಸುಭಾಷ್ಚಂದ್ರ ನಾಯಕ್, ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್., ಬ್ರಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘ ವಿಟ್ಲ ಇದರ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕ ಕೆ.ಸಂಜೀವ ಪೂಜಾರಿ, ರತ್ನಾಕರ ಪೂಜಾರಿ ನಾಡಾರ್, ಉಮೇಶ್ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಲಕ್ಷ್ಮೀ ಪೆರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಶಾಖಾ ವ್ಯವಸ್ಥಾಪಕ ಹೇಮಂತ್ ಕುಮಾರ್ ಸಹಿತ ಸಿಬಂದಿಗಳು , ಗಣ್ಯರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
6 ನೇ ಶಾಖೆ ವಿಟ್ಲ ಶಾಖೆ
ಮೆಲ್ಕಾರ್ನಲ್ಲಿ ಕೇಂದ್ರ ಕಛೇರಿ ಮತ್ತು ಶಾಖೆಯನ್ನು ಹೊಂದಿದ್ದು ಪಚ್ಚಿನಡ್ಕ, ಕಕ್ಯಪದವು, ಅಜಿಲಮೊಗರು, ಕಡೆಗೋಳಿಯಲ್ಲಿ ಶಾಖೆಯನ್ನು ಹೊಂದಿದೆ. ಪ್ರಸ್ತುತ 6ನೇ ವಿಟ್ಲ ಶಾಖೆಯು ಲೋಕಾರ್ಪಣೆ ಆಗಲಿದೆ.