ಬಂಟ್ವಾಳ :ತಾಲೂಕಿನ ಗೋಳ್ತ ಮಜಲು, ಬಾಳ್ತಿಲ, ವೀರಕಂಬ,ಬೋಳಂತೂರು, ಅಮ್ಟೂರು, ಬೋಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರಿಯರ 168ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುಪೂಜೆ ಮತ್ತು ಶ್ರೀ ಶಾರದಾಂಬ ಭಜನಾ ಮಂದಿರ ಶೃಂಗಗಿರಿ ಗುಂಡಿಮಜಲು ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನ.13 ರಂದು ಬೆಳಿಗ್ಗೆ ಗಂಟೆ 9 ರಿಂದ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಪಂಟಪದಲ್ಲಿ ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ನೆರವೇರಿಸಲಿದ್ದು, ಶ್ರೀ ನಾರಾಯಣ ಗುರುತತ್ವ ಉಪನ್ಯಾಸವನ್ನು ರೇಣುಕಾ ಕಣಿಯೂರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ, ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆ ಮಾರು ಇದರ ಪ್ರಮುಖರಾದ ಮನೋಜ್ ಕುಮಾರ್ ಕಟ್ಟೆಮರ್, ಬಿರುವ ಸೆಂಟರ್ ಮೆಲ್ಕರ್ ಇದರ ಮಾಲಕರಾದ ಸಂಜೀವ ಪೂಜಾರಿ,ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್, ಮರಕಡ ಬೈಲು ಗುತ್ತು ಗರಡಿ ಮನೆ ಧರ್ಮ ಚಾವಡಿ ಅಧ್ಯಕ್ಷರಾದ ರಾಘವ ಅಮೀನ್, ಓಂ ಸಾಯಿ ಕನ್ಸ್ಟ್ರಕ್ಷನ್ ಬಾಲ್ತಿಲ ಇದರ ಮಾಲಕರಾದ ರವಿಶಂಕರ್, ಮಾತೃಭೂಮಿ ಕಂಟ್ರಕ್ಷನ್ ಬರಿಮಾರು ಇದರ ಮಾಲಕರಾದ ಸದಾನಂದ ಪೂಜಾರಿ , ಶ್ರೀ ಭಗವಾನ್ ಸಾಯಿಬಾಬಾ ಅರ್ಥ ಮೂವರ್ಸನ ಮಾಲಕರಾದ ಕಿಶೋರ್ ಕುಮಾರ್ ಕಟ್ಟೆಮರ್, ಸುರಭಿ ಬಾರ್ ಅಂಡ್ ರೆಸ್ಟೋರೆಂಟ್ ಮಾರ್ನ ಬೈಲು ಇದರ ಮಾಲಕರಾದ ಅಜಯ್ ಕುಮಾರ್, ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ಕಲ್ಲಡ್ಕ ಇದರ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಮೊದಲಾದವರು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಲ್ಲವ ಸಮುದಾಯದ ಬಂಧುಗಳನ್ನು ಗೌರವಿಸಲಾಗುವುದು, ಸಭಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಹಾಗೂ ಕಲ್ಲಡ್ಕ ಕಲಾವಿದರಿಂದ ಹಾಸ್ಯ ಪ್ರಹಸನ ಹಾಗೂ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೆ ಶಿವಾಲಯ ಇವರಿಂದ ನೃತ್ಯ ಕಾರ್ಯಕ್ರಮ ನೆರವೇರಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.