ಮಹಾಯೋಜನೆ ಅನುಮೋದನೆಯಾಗುವ ತನಕ ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲು ಸಚಿವ ಯತೀಂದ್ರಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲು ಉದ್ದೇಶಿಸಲಾಗಿದೆ. ಇದರಿಂದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ (ಕನ್ವರ್ಶನ್) ಮಾಡಿಸಲು ಅಸಾಧ್ಯವಾಗಿದ್ದು, ಸರಕಾರದ ಯೋಜನೆ ಅನುಮೋದನೆಯಾಗುವ ತನಕ ಕನ್ವರ್ಶನ್‌ಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಕರ್ನಾಟಕ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮ್ಯಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರಕ್ಕೆ ಒಳಪಡಿಸಲಾಗಿದೆ. ಆದುದರಿಂದ ಮಹಾ ಯೋಜನೆಗೆ ಅನುಮೋದನೆ ಆಗುವವರೆಗೆ ಸದರಿ ಪ್ರದೇಶವನ್ನು ಕೃಷಿ ವಲಯ ಎಂದು ಪರಿಗಣಿಸಿ ಯಾವುದೇ ಜಮೀನನ್ನು ಭೂಪರಿವರ್ತನೆ (ಕನ್ವರ್ಶನ್) ಮಾಡದಂತೆ ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸದರಿ ಮಹಾ ಯೋಜನೆ ಅನುಮೋದನೆ ಆಗಲು ಸಮಯಾವಕಾಶವಿದ್ದು, ಪ್ರಸ್ತುತ ಸಾರ್ವಜನಿಕರು ಮನೆ ನಿರ್ಮಾಣ ಮಾಡಲು ಹಾಗೂ ಇತರ ಉದ್ದೇಶಕ್ಕೆ ಭೂಪರಿರ್ವತನೆ ಮಾಡಲು ನೀಡಿದ ಹಲವಾರು ಅರ್ಜಿಗಳು ಬಾಕಿ ಇರುತ್ತದೆ. ಆದುದರಿಂದ ಮಹಾಯೋಜನೆ ಅನುಮೋದನೆ ಆಗುವವರೆಗೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ ಅವರನ್ನು ಭೇಟಿಯಾಗಿ ಶಾಸಕರು ಮನವಿ ಸಲ್ಲಿಸಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್‌ನ್ನು ಪುತ್ತೂರು ನಗರ ಯೋಜನಾಪ್ರಾಧಿಕಾರ ವ್ಯಾಪ್ತಿಗೆ ಒಳಪಡಿಸಲು ಸರಕಾರ ಆದೇಶವನ್ನು ಮಾಡಿದೆ. ಈ ಆದೇಶದಿಂದಾಗಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ (ಕನ್ವರ್ಶನ್) ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರದ ಹೊಸ ಆದೇಶ ಅನುಮೋದನೆಯಾಗುವ ತನಕ ಈಗಾಗಲೇ ಕನ್ವರ್ಶನ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಇಲಾಖೆಗೆ ಆದೇಶ ಮಾಡಬೇಕೆಂದು ಸಚಿವರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿಯನ್ನು ನೀಡಿದ್ದೇನೆ. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮದ ಭರವಸೆಯನ್ನು ನೀಡಿದ್ದಾರೆ.
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here