ತಾರತಮ್ಯವಿಲ್ಲದೆ ಆರೋಗ್ಯ ಸೇವೆ ನೀಡುವುದರಿಂದ ವೈದ್ಯರ ಬದುಕು ಸಾರ್ಥಕ: ಡಾ. ಸುದೀಪ್ ಕುಮಾರ್
ಬಂಟ್ವಾಳ: ಯಾವುದೇ ಭೇದಭಾವವಿಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯಪೂರ್ಣ ಸೇವೆ ಸಲ್ಲಿಸುವುದರಿಂದ ವೈದ್ಯರ ಬದುಕು ಸಾರ್ಥಕವಾಗುತ್ತದೆ ಎಂದು ಸಿದ್ದಕಟ್ಟೆ ಅನಂತ ಪದ್ಮನಾಭ ಹೆಲ್ತ್ ಸೆಂಟರ್ನ ಡಾ. ಸುದೀಪ್ ಕುಮಾರ್ ಹೇಳಿದರು.
ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಬಂಟ್ವಾಳ ವತಿಯಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿಯೇ ಮಾದರಿ ಕ್ಲಬ್ ಆಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.
ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷರಾದ ರೋ. ಗೀತಾ ಬಲ್ಲಾಳ್ ಗೌರವಾರ್ಪಣೆ ಮಾಡಿ, ವೈದ್ಯರ ಸೇವೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ರಾಜೇಶ್ ಶೆಟ್ಟಿ ರಾಯಿ ಶೀತಲಾ, ಸುಮಿತ್ರಾ ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು, ರಾಜೇಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು. ರೋ. ರಮೇಶ್ ನಾಯಕ್ ರಾಯಿ ಸ್ವಾಗತಿಸಿ ಧನ್ಯವಾದವಿತ್ತರು.








