ನವಿಮುಂಬೈನಲ್ಲಿರುವ ವಸಂತ ಜಿ. ಕುಂಜಾರ್ ರವರ ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ಗೆ ಒಡಿಯೂರು ಶ್ರೀ ಭೇಟಿ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ‌ ಸ್ವಾಮೀಜಿರವರು ನವಿಮುಂಬೈನ ಕಾರ್ಗರ್ ನಲ್ಲಿರುವ, ಪುತ್ತೂರು ತಾಲೂಕು ಕುಂಜಾರು ನಿವಾಸಿ ವಸಂತ ಜಿ. ಕುಂಜಾರ್ ರವರ ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ಗೆ ಭೇಟಿ ನೀಡಿದರು. 

ಸ್ವಾಮೀಜಿರವರನ್ನು ವಸಂತ ಜಿ. ಕುಂಜಾರು ಹಾಗೂ ಸುಮಿತ್ರಾ ದಂಪತಿಗಳು ಬರಮಾಡಿಕೊಂಡರು. ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ನ ಕಾರ್ಯವೈಕರಿಯ ಬಗ್ಗೆ ವಸಂತಕುಂಜಾರ್ ರವರು ಶ್ರೀಗಳಿಗೆ ಮಾಹಿತಿ ನೀಡಿದರು‌.  ಈ ಸಂದರ್ಭದಲ್ಲಿ ವಸಂತ ಜಿ. ಕುಂಜಾರ್ ರವರ ಮಕ್ಕಳಾದ ಭವಿಶ್, ಸ್ವರಾಜ್ ಮಾತ್ರೆ, ಪ್ರಮುಖರಾದ ದಾಮೋದರ ಶೆಟ್ಟಿ, ಬಿ.ಕೆ.ಸುವರ್ಣ, ಜಗದೀಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಒಡಿಯೂರು ಶ್ರೀಗಳು ಜು.31ರವರೆಗೆ  ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ, ಮಹಾರಾಷ್ಟ್ರ ಘಟಕವು ಮುಂಬೈ, ನವಿಮುಂಬೈ, ಥಾನಾ ನಗರಗಳಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅನುಗ್ರಹಿಸಲಿರುವ ನಿಟ್ಟಿನಲ್ಲಿ ಜು.19ರಂದು ಮುಂಬೈಗೆ ತೆರಳಿದ್ದರು. 

LEAVE A REPLY

Please enter your comment!
Please enter your name here