ಫರಂಗಿಪೇಟೆ: ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಸಾಧನಾ ಸಮಾವೇಶ

0

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ, ಪ್ರಗತಿಬಂಧು ಸ್ವ -ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಬಂಟ್ವಾಳ ತಾಲ್ಲೂಕು ಇದರ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಸಾಧನಾ ಸಮಾವೇಶ ಸೇವಾಂಜಲಿ ಸಭಾಂಗಣ ಫರಂಗಿಪೇಟೆಯಲ್ಲಿ ಮಾ.13ರಂದು ನಡೆಯಿತು.

ತುಂಬೆ ವಲಯ ಅಧ್ಯಕ್ಷೆ ಲೀಡಿಯಾ ಪಿಂಟೋ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಲಸೆಗೆ ಬತ್ತ ತುಂಬಿಸಿ, ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಗ್ರಾಮ ಅಭಿವೃದ್ಧಿ ಯೋಜನೆ ವಿಶ್ವಾಸದ ಮೇಲಿನಂತಿದೆ, ಪೂಜ್ಯ ವೀರೇಂದ್ರ ಹೆಗ್ಡೆಯವರ ಮೇಲಿನ ವಿಶ್ವಾಸದಿಂದ ಬಹಳಷ್ಟು ಜನ ಯೋಜನೆಯನ್ನು ಸ್ವೀಕರಿಸಿದ್ದಾರೆ, ಸಾಲಕ್ಕಾಗಿ ಸಂಘ ಒಳ್ಳೆಯದಲ್ಲ ಅಭಿವೃದ್ಧಿಗಾಗಿ ಸಂಘ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ತುಂಬೆ ವಲಯಕದ ಸಂಬಂಧಪಟ್ಟ 7 ಒಕ್ಕೂಟಗಳ ಉತ್ತಮ ತಂಡಗಳನ್ನು ಗುರುತಿಸಿ ಸನ್ಮಾನಿಸಲಾಯಿತು, ಹಾಗೂ ಸಾಧಕ ಸದಸ್ಯರನ್ನು ಗೌರವಿಸಲಾಯಿತು.ಹಾಗೂ ಯೋಜನೆಯ ಸಂಪೂರ್ಣ ಸುರಕ್ಷಾ ಸೌಲಭ್ಯದ ಚೆಕ್ ವಿತರಿಸಲಾಯಿತು.

ವೇದಿಕೆಯಲ್ಲಿ ಸೇವಂಜಲಿ ಪ್ರತಿಷ್ಠಾನ ಪರಂಗಿಪೇಟೆ ಇದರ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ್ ಪೂಂಜ, ಯೋಜನೆಯ ಜಿಲ್ಲಾನಿರ್ದೇಶಕ ಸತೀಶ್ ಶೆಟ್ಟಿ,ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸದಸ್ಯ ಐತಪ್ಪ ಅಳ್ವ ಸುಜೀರ್ ಗುತ್ತು, ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರ ಕೋಟ್ಲು, ಸಮಾಜ ಸೇವಕಿ ವಸಂತಿ ಲೋಕನಾಥ್ ಶೆಟ್ಟಿ ಪರ್ಲಿಯ ಬಿಸಿ ರೋಡ್, ಕಲ್ಲಿಗೆ ಒಕ್ಕೂಟ ಅಧ್ಯಕ್ಷ ಜಯಂತ್, ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ , ನಂದಾವರ ಒಕ್ಕೂಟ ಅಧ್ಯಕ್ಷ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿಗಳಾದ ಬಬಿತಾ, ಅಮಿತಾ, ವನಿತಾ ಪ್ರಾರ್ಥಿಸಿ, ನರಿಕೊಂಬು ಎ ಒಕ್ಕೂಟ ಸೇವಾ ಪ್ರತಿನಿಧಿ ಕುಸುಮಾವತಿ ಸ್ವಾಗತಿಸಿ, ಪರಂಗಿಪೇಟೆ ಒಕ್ಕೂಟ ಸೇವಾ ಪ್ರತಿನಿಧಿ ಅಮಿತಾ ಸಾಧನ ವರದಿ ವಾಚಿಸಿದರು. ಪರಂಗಿಪೇಟೆ ಒಕ್ಕೂಟ ಅಧ್ಯಕ್ಷ ಸುಕೇಶ್ ಶೆಟ್ಟಿ ವಂದಿಸಿ, ತುಂಬೆ ವಲಯ ಮೇಲ್ವಿಚಾರಕಿ ಮಮತ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು .ಸೇವಾಪ್ರತಿನಿಧಿಗಳಾದ ಪ್ರತಿಭಾ, ಮಲ್ಲಿಕಾ, ಅನಿತಾ, ಸಹಕರಿಸಿದರು.

LEAVE A REPLY

Please enter your comment!
Please enter your name here