ಬಂಟ್ವಾಳ | ಕಾರು – ಬೈಕ್ ಅಪಘಾತ: ಓರ್ವ ಮೃತ್ಯು,ಇನ್ನೋರ್ವ ಗಂಭೀರ

0

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ  ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ರಾಯಿ ಎಂಬಲ್ಲಿ ನಡೆದಿದೆ. ಬಂಟ್ವಾಳ ಬೈಪಾಸ್ ನಿವಾಸಿ ವಿದ್ಯುತ್ ಗುತ್ತಿಗೆದಾರ ಚಂದ್ರಶೇಖರ ಮೃತಪಟ್ಟಿದ್ದು, ಬಂಟ್ವಾಳ ನಿವಾಸಿ ಇಡ್ಲಿ ಯೋಗೀಶ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕಿನಲ್ಲಿ ಸಿದ್ದಕಟ್ಟೆಯಿಂದ ಬಂಟ್ವಾಳ ಕಡೆ ಬರುತ್ತಿದ್ದಾಗ ಸುಮಾರು 11 ಗಂಟೆ ವೇಳೆಗೆ ರಾಯಿ ಎಂಬಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದ ಹಿಂಬದಿ ಸವಾರ ಚಂದ್ರಶೇಖರ ಅವರು ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ.ಕಾರು ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯೆ ಘಟನೆ ಗೆ ಕಾರಣ ಎನ್ನಲಾಗಿದ್ದು, ಮೆಲ್ಕಾರ್ ಸಂಚಾರಿ ಠಾಣಾಧಿಕಾರಿ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here