ಬಂಟ್ವಾಳ : ಬಾಳ್ತಿಲ ಶ್ರೀಶೈಲದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಇದರ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಜೊತೆಗೆ ಸಂಸ್ಥೆಯ ಸಹಭಾಗಿತ್ವದಲ್ಲಿ,ಶ್ರೀಶೈಲ ಕಲಾನೃತ್ಯ ತರಬೇತಿ ,ಭಜನೆ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು.
ಯೋಗ ತರಬೇತಿ ಮತ್ತು ಅದರ ಉಪಯೋಗದ ಮಾಹಿತಿಯನ್ನು ತುಳಸಿ ಅವರು ನಡೆಸಿಕೊಟ್ಟರು. ಗ್ರಾಮೀಣ ಮಹಿಳಾ ಸಾಧಕಿ ತುಳಸಿ, ನೀಲಮ್ಮ, ಹೊನ್ನಮ್ಮ ಇವರನ್ನು ಗೌರವಿಸಲಾಯಿತು
ನ್ಯಾಯವಾದಿ,ಕರ್ನಾಟಕ ಸರಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು,ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಇದರ ಸಂಸ್ಥಾಪಕರು ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡರು.
ಶಾರದಾ ಜಿ ಬಂಗೇರ ಮಹಿಳೆಯರಿಗೆ ಪಾರ್ದಾನ , ಕಬಿತೆ ಯನ್ನು ಹೇಳಿದರು, ಡಾ. ರಾಜೇಶ್ ಪೂಜಾರಿ,ಭಾಸ್ಕರ್ ಉಪಸ್ಥಿತರಿದ್ದರು,ಕಾರ್ಯಕ್ರಮವನ್ನು ಶೌರ್ಯ ನಿರೂಪಿಸಿದರು.
ಬಳಿಕ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.