
ಬಂಟ್ವಾಳ: ಕೃಷಿ ಇಲಾಖೆಯಿಂದ ಬೊಲ್ಪು ರೈತ ಉತ್ಪಾದಕರ ಕಂಪೆನಿಗೆ ೨೦೨೨-೨೩ ಸಾಲಿಗೆ ಮಂಜೂರಾದ ಟ್ರಾಕ್ಟರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಫೆ. 27 ರಂದು ಬಿ.ಸಿ.ರೋಡ್ ಸ್ವರ್ಶ ಕಲಾ ಮಂದಿರದಲ್ಲಿ ನಡೆದ ಸರಕಾರದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಕಂಪೆನಿಯ ವ್ಯವಸ್ಥಾಪನಾ ನಿರ್ದೇಶಕ ರಾಜಾ ಬಂಟ್ವಾಳ್ ಅವರಿಗೆ ಕೀ ಹಸ್ತಾಂತರ ಮಾಡಿದರು.

ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಕೃಷಿ ಇಲಾಖೆ ಎಡಿಎ ಕೆ. ವೀಣಾ, ಬೊಲ್ಪು ಸಿಇಒ ಲೋಹಿತ್ ನೆಟ್ಲ, ತೆಂಗು ಸೌಹಾರ್ಧ ಸಹಕಾರಿ ಸಿಇಒ ಹರ್ಷಿತ್ ಕುಮಾರ್, ಗಣ್ಯರಾದ ಪುಷ್ಪರಾಜ ಚೌಟ, ಗಣೇಶ್ ರೈ ಮಾಣಿ, ನರಿಕೊಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಗ್ರಾ.ಪಂ. ಸದಸ್ಯ ಕಿಶೋರ್ ಶೆಟ್ಟಿ ಅಂತರ ಮತ್ತು ಇತರರು ಉಪಸ್ಥಿತರಿದ್ದರು.









