ಮಜಿ ಸ. ಪ್ರಾ ಶಾಲೆಯ ಸಹಶಿಕ್ಷಕಿ ಸಿಸಿಲಿಯಾ ಅವರ ಬೀಳ್ಕೊಡುಗೆ ಸಮಾರಂಭ

0

ಬಂಟ್ವಾಳ : ಶಿಕ್ಷಕನು ತನ್ನ ವಿದ್ಯಾರ್ಥಿಗಳನ್ನು ಜ್ಞಾನ, ಕೌಶಲ, ಮತ್ತು ಸಕಾರಾತ್ಮಕ ನಡವಳಿಕೆಯೊಂದಿಗೆ ಸಜ್ಜುಗೊಳಿಸುತ್ತಾನೆ. ಅದನ್ನು ವಿದ್ಯಾರ್ಥಿ ಯು ಎಂದಿಗೂ ಕಳೆದುಕೊಳ್ಳುದಿಲ್ಲ, ಶಿಕ್ಷಕ ಜ್ಞಾನದ ಅರಿವು ಮೂಡಿಸುತ್ತಾರೆ ಒಬ್ಬ ಒಳ್ಳೆಯ ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತಾನೆ ಎಂದು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸಿಸಿಲಿಯಾ ವಯೋ ನಿವೃತ್ತಿ ದಿನದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಜಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಂಜೀವ ಮೂಲ್ಯ ಮಾತನಾಡಿದರು.

ಕಾಯ೯ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಜಾನೇಶ್ ದೇಹ, ವಿಧ್ಯೆ ಸುಂದರತೆಯ ಕೆಲಸದ ಸಂಪತ್ತು ಜೀವನದ ಸಾಥ೯ಕತೆಯನ್ನು ಉಂಟುಮಾಡುತ್ತದೆ ಪಠ್ಯದ ಜೊತೆಗೆ ಜೀವನದ ಮೌಲ್ಯಗಳನ್ನು ತುಂಬುವ ಗುರು ಮಗುವಿನ ಮೇಲೆ ಉತ್ತಮ ಪ್ರಭಾವ ಬೀರುತ್ತಾನೆ ಎಂದರು.

ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ, ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಸನ್ಮಾನಿತ ಶಿಕ್ಷಕಿಯ ಪತಿ ವೆಲೇರಿಯನ್ ವೆಗಸ್,ಮಜಿ ಶಾಲೆಯ ನಿವೃತ್ತ ಶಿಕ್ಷಕಿ ಶಕುಂತಲಾ, ಶಿಕ್ಷಣ ಸಂಯೋಜಕಿ ಆಗಿ ಸೇರಿ ಸಲ್ಲಿಸಿ ನಿವೃದ್ಧರಾದ ಪುಷ್ಪ, ಶಿಕ್ಷಕಿಯ ಸಹೋದರ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಹಾಗೂ ಪದನಿಮಿತ ಸಹ ನಿರ್ದೇಶಕ ಡಾ | ಸಿಪ್ರಯನ್ ಮೊಂತೇರೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಶಿಕ್ಷಕ ಸಂಘದ ಪದಾಧಿಕಾರಿಗಳಾದ ಸಂತೋಷ್ ಕುಮಾರ್, ಸುನೀಲ್ ಸಿಕ್ವೇರಾ, ಶ್ರೀಪತಿ ನಾಯಕ್ , ಇಸ್ಮಾಯಿಲ್, ಯತೀಶ್, ಶಶಿ ಹಾಗೂ ಸುನೀತಾ ರೈ,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಮಕ್ಕಳು, ಮಕ್ಕಳ ಪೋಷಕರು, ಸಂಘ-ಸಂಸ್ಥೆಗಳ ಸದಸ್ಯರುಗಳು, ಶಾಲಾ ಹಿರಿಯ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ನಾನಾ ಸಂಸ್ಥೆಗಳ ವತಿಯಿಂದ ಶಿಕ್ಷಕಿಯನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಹ ಶಿಕ್ಷಕಿ ಅನುಷಾ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಶಿಕ್ಷಕಿಯರು ಸಹಕರಿಸಿದರು

LEAVE A REPLY

Please enter your comment!
Please enter your name here