ಪುತ್ತೂರು : ಶ್ರೀ ರಾಮ ಪದವಿ ಪೂರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಕಾರ್ಯಕ್ರಮವು ಫೆ.8ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀರಾಮನ ಗುಣಗಳು ಮೈಗೂಡಲಿ ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣದ ಕಡೆಗೆ ಆಸಕ್ತಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಕಲ್ಲಡ್ಕ ಪ್ರಭಾಕರ್ ಭಟ್ ಶ್ರೀ ರಾಮ ವಿದ್ಯಾಕೇಂದ್ರವು ಅನೇಕ ಅನುಭವಗಳ ಕಣಜ ನಮ್ಮ ವಿದ್ಯಾಭ್ಯಾಸ ಕೇವಲ ಅಂಕಗಳಿಗೆ ಮೀಸಲಾಗಿರದೆ ಮೌಲ್ಯಧಾರಿತ ಅಂಕಗಳಿಗೆ ಬದಲಾಗಬೇಕುಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ವಿಧಾನಸಭೆಯ ಶಾಸಕ ರಾಜೇಶ್ ನಾಯಕ್, ಮಂಗಳೂರು ವಿಧಾನ ಸಭೆ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಕಾಮತ್, ಉಡುಪಿ ಪ್ರಸಾದ ನೇತ್ರಾಲಯದ ನಿರ್ದೇಶಕ ಕೃಷ್ಣ ಪ್ರಸಾದ್‌ಕೂಡ್ಲು, ಚೇರ್ಮನ್ ಮೈ ವೀರ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬೈಯ ಪ್ರವೀಣ್ ಹೆಗ್ಡೆ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್. ಸಿ.ರಮೇಶ್, ಮುಂಬೈ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಂಡಾರಿ, ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ , ಬಂಟ್ವಾಳ ವಿಧಾನ ಸಭೆಯ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಕರ್ನಾಟಕ, ಸೇವಿಕಾ ಹೊಯ್ಸಳ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ಕಮಲಾ ಪ್ರಭಾಕರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದ ಸಮೃದ್ಧಿ, ರಂಜಿತ್, ರೋಶಿತ್ ಕಲಾ ವಿಭಾಗದ ಕುಮಾರಿ ಹರ್ಷಿತಾ, ಭೂಷಣ್, ವಾಣಿಜ್ಯ ವಿಭಾಗದಕೃತಿಕಾ, ಗೌತಮಿ, ಅಶ್ವಿನಿ, ರುಚಿತಾ, ಅಧಿಕ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಪ್ರಥಮ ವಾಣಿಜ್ಯ ವಿಭಾಗದ ಪ್ರಿಯಾಂಕ ಸ್ವಾಗತಿಸಿ, ಪ್ರಥಮ ವಿಜ್ಞಾನ ವಿಭಾಗದ ವೆಂಕಟೇಶ್ ವಂದಿಸಿ,ಪ್ರಥಮ ವಿಜ್ಞಾನ ವಿಭಾಗದ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಮತ್ತು ಹಿಂದಿ ಉಪನ್ಯಾಸಕಿ ಶ್ ಶೋಭಾ ವಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.