ಕಾರಿಂಜ : ಸುಮಾರು 2 ಕೋಟಿ ವೆಚ್ಚದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗದಾತೀರ್ಥ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ. ರಸ್ತೆ , ನೀರು ಸಹಿತ ಮೂಲಭೂತ ಸೌಕರ್ಯಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ, ಕಾರಿಂಜೇಶ್ವರ ದೇವಾಲಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಶಾಸಕರು ದೇವಾಲಯದ ಬಗ್ಗೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಪ್ರಮುಖರಾದ ಡೊಂಬಯ ಅರಳ, ರಮನಾಥ ರಾಯಿ, ಚಿದಾನಂದ ರೈ, ಸುದರ್ಶನ್ ಬಜ, ಹರೀಶ್ ಪ್ರಭು,ಶಾಂತಪ್ಪ ಪೂಜಾರಿ,ವಸಂತ ಅಣ್ಣಳಿಕೆ, ಧನಂಜಯ ಶೆಟ್ಟಿ, ಕಾವಳಮೂಡೂರು ಗ್ರಾ.ಪಂ.ಆದ್ಯಕ್ಷೆ ಜಯಲಕ್ಮಿ , ಉಪಾಧ್ಯಕ್ಷ ಅಜಿತ್ ಶೆಟ್ಟಿ, ಸದಸ್ಯ ರಾದ ಪ್ರಶಾಂತ್ ಶೆಟ್ಟಿ, ರಾಜ್ ಗೋಪಾಲ್, ಗಣೇಶ್ ದೇವಾಡಿಗ, ಶೇಷಗಿರಿ, ವೀಣಾ , ರೇವತಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರಾದ ಅನಂದ ಶೆಟ್ಟಿ ಶೆಡ್ಮೆ, ಪ್ರವೀಣ್ ಪೂಜಾರಿ, ರಾಘವೇಂದ್ರ ನಾಯ್ಕ್, ಸುಮನಾ ಎಳಚಿತ್ತಾಯ , ಮಾಲತಿ ಉಪಾಧ್ಯಾಯ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಜಿನೇಂದ್ರ ಜೈನ್, ಶರ್ಮಿತ್ ಜೈನ್, ಮೋಹನ್ ಆಚಾರ್, ತಿಮ್ಮಪ್ಪ ಶೆಟ್ಟಿ , ರಾಜರಾಮ್ ನಾಯಕ್ , ಸತೀಶ್ ಶಿವಪ್ಪ ಗೌಡ ನಿನ್ನಿಕಲ್ಲು, ರಾಮಕೃಷ್ಣ ಮಯ್ಯ, ಸಂತೋಷ್ ರಾಯಿಬೆಟ್ಟು,ಸುಪ್ರೀತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.