ಬಂಟ್ವಾಳ: ಪರೋಪಕಾರಾರ್ಥಂ ಇದಂ ಶರೀರಂ ಎಂಬ ತತ್ವವನ್ನಿರಿಸಿ ಸರ್ವವೂ ಸಮಾಜಕ್ಕರ್ಪಿತ ಎಂಬಂತೆ ಯುವಶಕ್ತಿ ಸೇವಾಪಥದ ಪ್ರಥಮ ವಾರ್ಷಿಕ ಸಂಭ್ರಮ ಕಲ್ಲಡ್ಕ ಉಮಾಶಿವ ಕ್ಷೇತ್ರದಲ್ಲಿ ಜ.22ರಂದು ಜರಗಿತು. ಕಲ್ಲಡ್ಕ ಉಮಾಶಿವ ದೇವಳದ ಅಧ್ಯಕ್ಷ ಈಶ್ವರ ಭಟ್ ಅಧ್ಯಕ್ಷತೆಯಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ 20 ಅಶಕ್ತ ಕುಟುಂಬಗಳಿಗೆ ತಲಾ 25 ಸಾವಿರದಂತೆ 5 ಲಕ್ಷ ರೂಗಳನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯೆ ರಜನಿ ಶೆಟ್ಟಿ, ಹಿಂಜಾವೇ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ,ಉದ್ಯಮಿ ವಿಜೇಶ್ ನಾಯ್ಕ್ ನಡಿಗುತ್ತು, ದೇವಿಪ್ರಸಾದ್ ಬೇಂಗದಡಿ,ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ, ಬಾಲಕೃಷ್ಣ ಮುಡಿಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀದೇವಿ ಕೆ, ಯುವಶಕ್ತಿಯ ಸೇವಾಕೈಂಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಯೋಚಿತ ವಿಚಾರಗಳನ್ನು ಮಂಡಿಸಿದರು.
ಇದೇ ವೇಳೆ ಅರ್ಜುನ್ ಭಂಡಾರ್ಕರ್ ಹಾಗೂ ರಜನಿ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿನೇಶ್ ಪೂಜಾರಿ ಬಡೆಕೊಟ್ಟು ಸ್ವಾಗತಿಸಿ, ,ದುರ್ಗಾಪ್ರಸಾದ್ ಅಮೈ ವಂದಿಸಿ , ವಿಜಿತ್ ಶೆಟ್ಟಿ ಸಂಪೋಳಿ ವಾರ್ಷಿಕ ವರದಿವಾಚನಗೈದು, ಆಕಾಶವಾಣಿ ನಿರೂಪಕಿ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.